Sunday, June 7, 2026
Homeತಾಜಾ ಸುದ್ದಿಪದವಿ ಪರೀಕ್ಷೆ ಬರೆದು ಶೇ 77.25 ಅಂಕದೊಂದಿಗೆ ಪಾಸ್ ಆದ ಹಿರಿಯ ಸಚಿವ !

ಪದವಿ ಪರೀಕ್ಷೆ ಬರೆದು ಶೇ 77.25 ಅಂಕದೊಂದಿಗೆ ಪಾಸ್ ಆದ ಹಿರಿಯ ಸಚಿವ !

- Advertisement -
- Advertisement -

ಮುಂಬೈ: ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಹಾಗೂ ಶಿವಸೇನೆ ಪಕ್ಷದ ಮುಖಂಡ ಏಕನಾಥ್‌ ಶಿಂಧೆ ಅವರು ಕಲಾ ವಿಭಾಗದಲ್ಲಿ ಶೇ 77.25 ಅಂಕ ಪಡೆದು ಪದವಿಯನ್ನು ಪಡೆದಿದ್ದಾರೆ ಎಂದು ಅವರ ಪುತ್ರ, ಲೋಕಸಭಾ ಸಂಸದ ಶ್ರೀಕಾಂತ್‌ ಅವರು ಘೋಷಿಸಿದ್ದಾರೆ.

‘ಯುವಕರಾಗಿದ್ದ ಸಂದರ್ಭದಲ್ಲಿ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಅಧ್ಯಯನವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದ ತಂದೆಯವರು, ಇದೀಗ ತಮ್ಮ 56 ನೇ ವಯಸ್ಸಿನಲ್ಲಿ ಯಶವಂತರಾವ್‌ ಚೌವಾಣ್‌ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಜೀವನದಲ್ಲಿ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದರೆ ಯಾರು ಯಾವಾಗ ಬೇಕಿದ್ದರೂ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ನನ್ನ ತಂದೆಯ ಫಲಿತಾಂಶವೇ ಸಾಕ್ಷಿ’ ಎಂದು ಶ್ರೀಕಾಂತ್‌ ಅವರು ಟ್ವೀಟ್‌ ಮಾಡಿದ್ದಾರೆ.

- Advertisement -

Latest News

error: Content is protected !!