ಮಂಗಳೂರು: ಇಲ್ಲಿನ ಕಂದಾವರದಲ್ಲಿ ನಿನ್ನೆ ರಾತ್ರಿ ಉದ್ಯಮಿ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.ಬಜ್ಪೆ ಪೋಲೀಸ್ ಠಾಣೆ ವ್ಯಾಪ್ತಿಯಳ್ಳಿ ಕೃತ್ಯ ನಡೆದಿದೆ. ಕಂದಾವರ ಕೈಕಂಬ ನಿವಾಸಿ ಅಬ್ದುಲ್ ಅಜೀಜ್ (58) ಹಲ್ಲೆಗೊಳಗಾದವರು.ರಾತ್ರಿ 10.30 ರ ಸುಮಾರಿಗೆ ಅಬ್ದುಲ್ ಅಜೀಜ್ ನಮಾಜ್ ಮುಗಿಸಿ ಮಸೀದಿಯಿಂದ ತನ್ನ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಇಬ್ಬರು ಯುವಕರು ತಲ್ವಾರ್ ನಿಂದ ಹಲ್ಲೆ ನಡೆಸಿದರು. ದಾಳಿಯ ದೃಶ್ಯ ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೈಯುಕ್ತಿಕ ದ್ವೇಷದ ಕಾರಣಕ್ಕೆ ನಡೆದ ದಾಳಿ ಇದಾಗಿರಬಹುದು ಎಂದು ಶಂಕಿಸಲಾಗಿದ್ದು ಗಾಯಗೊಂಡ ಅಜೀಜ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಬ್ದುಲ್ ಅವರ ತಲೆ,, ಕೈ ಮತ್ತು ಕಾಲಿಗೆ ಹಲ್ಲೆಯಿಂದ ತೀವ್ರತರದ ಗಾಯಗಳಾಗಿದೆ. ಹಲ್ಲೆ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಬಜ್ಪೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.