Friday, June 5, 2026
Homeತಾಜಾ ಸುದ್ದಿಹಸಿರು ಪಟಾಕಿ ಅಂದ್ರೆ ಏನು? ಅರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳೋದು ಹೀಗೆ..

ಹಸಿರು ಪಟಾಕಿ ಅಂದ್ರೆ ಏನು? ಅರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳೋದು ಹೀಗೆ..

- Advertisement -
- Advertisement -

ಮೈಸೂರು: ಕೊರೊನಾ ಆತಂಕದಿಂದ ರಾಜ್ಯದಲ್ಲಿ ಪಟಾಕಿಗಳನ್ನ ನಿಷೇಧಿಸಿದ್ದು, ಹಸಿರು ಪಟಾಕಿಗಳನ್ನ ಮಾತ್ರ ಮಾರಾಟಕ್ಕೆ ಮತ್ತು ಸಿಡಿಸಲು ರಾಜ್ಯಸರ್ಕಾರ ಅವಕಾಶ ನೀಡಿದೆ. ಆದರೆ ಈ ಹಸಿರು ಪಟಾಕಿ ಅಂದ್ರೆ ಏನು ಎಂದು ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಬಳಿ ಕೇಳಿದಾಗ ಅವರು ಹೇಳಿದ್ದು ಹೀಗೆ..

‘ದೀಪಾವಳಿಯಲ್ಲಿ ಪಟಾಕಿ‌ ನಿಷೇಧದ ಬಗ್ಗೆ ನಮ್ಮ ಇಲಾಖೆಯಿಂದ ತಜ್ಞರು ಮಾರ್ಗಸೂಚಿ ಸಿದ್ಧಪಡಿಸಿದ್ದರು. ಅದನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಸಲ್ಲಿಸಿದ್ದೆ. ಆ ನಂತರ ಮುಖ್ಯಮಂತ್ರಿ, ಹಸಿರು ಪಟಾಕಿ ಸಿಡಿಸಲು ಮಾತ್ರ ಅನುಮತಿ ನೀಡಿದ್ದಾರೆ. ಸಮಯ ಕೂಡ ನಿಗದಿ ಮಾಡಿದ್ದಾರೆ. ಆದರೆ, ಹಸಿರು ಪಟಾಕಿ ಎಂದರೇನು ಎಂಬುದು ನನಗೂ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ಹೇಳುವೆ’ ಎಂದರು.

- Advertisement -

Latest News

error: Content is protected !!