Sunday, June 7, 2026
Homeಕರಾವಳಿಉಡುಪಿಸರ್ಕಾರದ ಮಾರ್ಗಸೂಚಿ ಮೀರಿ ಮದುವೆ ಸಮಾರಂಭಗಳಲ್ಲಿ ಜನಜಾತ್ರೆ- ಉಡುಪಿ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್!..

ಸರ್ಕಾರದ ಮಾರ್ಗಸೂಚಿ ಮೀರಿ ಮದುವೆ ಸಮಾರಂಭಗಳಲ್ಲಿ ಜನಜಾತ್ರೆ- ಉಡುಪಿ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್!..

- Advertisement -
- Advertisement -

ಉಡುಪಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರ ಜನರಿಗೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಸೇರಿ ಹಲವು ಷರತ್ತು ವಿಧಿಸಿದೆ. ಇವನ್ನು ಪಾಲನೆ ಮಾಡಬೇಕಾಗಿರುವುದು ನಾಗರಿಕರ ಕರ್ತವ್ಯವೂ ಹೌದು. ಆದರೆ ಮದುವೆ ಸಮಾರಂಭಗಳನ್ನು ನಡೆಸುವ ವೇಳೆ ಕೇವಲ 200 ಜನರು ಮಾತ್ರ ಸೇರಬೇಕು ಎಂಬ ಷರತ್ತು ಇತ್ತೀಚಿಗೆ ಮಾಯವಾದಂತಿದೆ. ಆದರೆ ಮದುವೆ ಸಮಾರಂಭಗಳಲ್ಲಿ 300-400ಕ್ಕೂ ಅಧಿಕ ಜನ ಸೇರುತ್ತಿರುವ ಬಗ್ಗೆ ವರದಿಯಾಗುತ್ತಿದೆ.

ಇಂತಹ ಘಟನೆಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಕೋವಿಡ್ ಸ್ಥಿತಿಗತಿಯ ಬಗ್ಗೆ ಮಾತನಾಡುವ ವೇಳೆ ವಅವರು, ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸುವ ಮೂಲಕ ಸಾರ್ವಜನಿಕರು ಅನಾರೋಗ್ಯಕ್ಕೆ ಕಾರಣವಾಗಬೇಡಿ ನಿಯಮ ಉಲ್ಲಂಘನೆ ಸರಿಯಲ್ಲ.

ಮದುವೆ ಕಾರ್ಯಕ್ರಮಗಳಲ್ಲಿ 200ಕ್ಕೂ ಹೆಚ್ಚಿನ ಜನರು ಭಾಗವಹಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ,ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳಬೇಕು. ಮೆಹಂದಿ ಮುಂತಾದ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆಯೂ ನಮ್ಮ ಅರಿವಿಗೆ ಬಂದಿದೆ.ಮುಂದಿನ ದಿನಗಳಲ್ಲಿ ಇಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

- Advertisement -

Latest News

error: Content is protected !!