Thursday, June 4, 2026
Homeತಾಜಾ ಸುದ್ದಿ10 ಲಕ್ಷ ವಂಚಿಸಿದಾತನನ್ನು 4 ವರ್ಷಗಳ ಬಳಿಕ ಬಂಧಿಸಿದ ಪೊಲೀಸರು

10 ಲಕ್ಷ ವಂಚಿಸಿದಾತನನ್ನು 4 ವರ್ಷಗಳ ಬಳಿಕ ಬಂಧಿಸಿದ ಪೊಲೀಸರು

- Advertisement -
- Advertisement -

ಮೈಸೂರು: ಕಳ್ಳರು ಚಾಪೆ ಕೆಳಗೆ ತೂರಿದ್ರೆ ಪೊಲೀಸರು ಚಾಪೆ ಕೆಳಗೆ ತೂರ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಹೀಗೆ ಗೋಡಂಬಿ ಮಾರಾಟ ಮಾಡುವ ಆಮಿಷವೊಡ್ಡಿ 10 ಲಕ್ಷ ವಂಚಿಸಿದ್ದ ಆರೋಪಿಯನ್ನು ಮೈಸೂರಿನ ಉದಯಗಿರಿ ಪೊಲೀಸರು ನಾಲ್ಕು ವರ್ಷಗಳ ಬಳಿಕ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಬಂಧಿತನನ್ನು ತಮಿಳುನಾಡಿನ ಪಳನಿಮಲೈ ಎಂದು ಗುರುತಿಸಲಾಗಿದೆ. ಈತ ಮೈಸೂರಿನ ಉದಯಗಿರಿಯ ನಿವಾಸಿ ರೋಹನ್ ಖಾನ್ ಎಂಬವರಿಗೆ 10 ಲಕ್ಷ ವಂಚಿಸಿದ್ದ. ಇಂಪೋರ್ಟ್-ಎಕ್ಪೋರ್ಟ್ ವ್ಯವಹಾರ ಮಾಡುತ್ತಿರುವ ರೋಹನ್ ಖಾನ್ ಗೆ ನಾಲ್ಕು ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ಆರ್‍ಟಿಜಿಎಸ್ ಮೂಲಕ ಆರೋಪಿ ಪಳನಿ ಮಲೈ ಹಾಗೂ ಪತ್ನಿ ರಾಧಿಕಾ ಪಳನಿ ಮಲೈ 10 ಲಕ್ಷ ರೂ. ಪಡೆದಿದ್ದರು.

ಆದರೆ ಗೋಡಂಬಿಯನ್ನೂ ಕೊಡದೆ ಹಣವನ್ನೂ ಹಿಂದಿರುಗಿಸದೆ ಆರೋಪಿ ತಲೆಮರೆಸಿಕೊಂಡಿದ್ದ. ನಾಲ್ಕು ವರ್ಷಗಳ ಸತತ ಪ್ರಯತ್ನದ ನಂತರ ಉದಯಗಿರಿ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!