ಮಹಾ ಎಕ್ಸ್‌ಪ್ರೆಸ್: ಗ್ರ್ಯಾಂಡ್ ಆಗಿ ಪತ್ನಿಯ ಬೇಬಿ ಶವರ್ (ಸೀಮಂತ) ಮಾಡಿದ ಪತಿ, ಅದೇ ಕಾರ್ಯಕ್ರಮದಲ್ಲಿ ತನ್ನ ಪತ್ನಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ತನ್ನದಲ್ಲ ಎಂದು ಸೇರಿದರವರ ಮುಂದೆ ಸಾಕ್ಷಿ ಸಮೇತ ಸಾಬೀತು ಪಡಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ತಾನು ನಂಬಿದ್ದ ಪತ್ನಿ, ತನ್ನ ಅನುಪಸ್ಥಿತಿಯಲ್ಲಿ ಪರ ಪುರುಷನೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿಸಿಕೊಂಡಿರುವ ವಿಡಿಯೋವನ್ನು ಪತಿ ಇದೇ ಸೀಮಂತ ಕಾರ್ಯಕ್ರಮದಲ್ಲಿ ರಿಲೀಸ್ ಮಾಡಿದ್ದಾರೆ.

ಹಾಗೆಯೆ ತಾನು 4 ತಿಂಗಳ ಗರ್ಭಿಣಿ ಎಂದು ಎಲ್ಲರನ್ನು ಮೂರ್ಖರನ್ನಾಗಿಸಿರುವ ಆತನ ಪತ್ನಿ 4 ತಿಂಗಳ ಗರ್ಭಿಣಿಯಲ್ಲ, 6 ತಿಂಗಳ ಗರ್ಭಿಣಿ ಎನ್ನುವುದಕ್ಕೆ ಸಾಕ್ಷಿಯಾಗಿರುವ ವೈದ್ಯಕೀಯ ಪರೀಕ್ಷೆಯ ಪತ್ರವನ್ನು ಎಲ್ಲರ ಮುಂದೆ ತೋರಿಸಿದ್ದಾನೆ.

ತಕ್ಷಣ ಪತ್ನಿ ಎಚ್ಚೆತ್ತುಕೊಂಡು ಇದನ್ನು ಖಾಸಗಿಯಾಗಿ ಮಾತಾಡೋಣ ಎಂದರೂ ಪತಿ ಇದನ್ನು ರಿವೀಲ್ ಮಾಡಿದ್ದಾನೆ. ಇದು ನನ್ನ ಮಗುವಲ್ಲ ಎಂದ ಪತಿ, ಈ ಪಾರ್ಟಿ ಇವರಿಬ್ಬರಿಗಾಗಿ ಎಂದು ಪತ್ನಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ನ್ನು ತೋರಿಸಿದ್ದಾನೆ. ಪತಿ ಸೀಮಂತ ಪಾರ್ಟಿ ಬಿಟ್ಟು ಹೋದರೆ, ಗರ್ಭಿಣಿ ಮಹಿಳೆಯ ಬಾಯ್‌ಫ್ರೆಂಡ್‌ಗೆ ಅಲ್ಲಿ ನೆರೆದಿದ್ದ ಜನ ಸರಿಯಾಗಿ ಧರ್ಮದೇಟು ನೀಡಿದ್ದಾರೆ.
ವಿಡಿಯೋ ನೋಡಿ


