Friday, June 5, 2026
Homeತಾಜಾ ಸುದ್ದಿನಟಿ ಖುಷ್ಬೂ ಬಳಿಕ ಮತ್ತೊಬ್ಬ ಕನ್ನಡದ ನಟಿ ಬಿಜೆಪಿಗೆ ಸೇರ್ಪಡೆ..

ನಟಿ ಖುಷ್ಬೂ ಬಳಿಕ ಮತ್ತೊಬ್ಬ ಕನ್ನಡದ ನಟಿ ಬಿಜೆಪಿಗೆ ಸೇರ್ಪಡೆ..

- Advertisement -
- Advertisement -

ಹೈದರಾಬಾದ್: ಪ್ರಾದೇಶಿಕ ಪಕ್ಷ ಪಕ್ಷಗಳ ಪ್ರಬಲ ಪೈಪೋಟಿಯ ನಡುವೆಯೂ ಪಕ್ಷ ಬಲವರ್ಧನೆಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಗೆ ತೆಲಂಗಾಣದಲ್ಲಿ ದೊಡ್ಡದೊಂದು ಹೊಡೆತ ಬೀಳುವ ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷೆ ಜನಪ್ರಿಯ ಸಿನಿಮಾ ನಟಿ ವಿಜಯಶಾಂತಿ “ಕೈ” ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರುತ್ತಿದ್ದಾರೆ ಎನ್ನುವ ಸುದ್ದಿ ಬಲ್ಲ ಮೂಲಗಳಿಂದ ಕೇಳಿ ಬರುತ್ತಿದೆ.

ದುಬ್ಬಾಕದಲ್ಲಿ ವಿಧಾನಸಭಾ ಉಪ ಚುನಾವಣೆಗೆ ತೀವ್ರ ಭರಾಟೆಯ ಪ್ರಚಾರ ನಡೆಯುತ್ತಿದ್ದರೂ, ಪ್ರಚಾರ ಸಮಿತಿ ಅಧ್ಯಕ್ಷೆಯಾಗಿ ವಿಜಯ ಶಾಂತಿ ಅತ್ತ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಕನಿಷ್ಟ ಸೋಷಿಯಲ್ ಮೀಡಿಯಾದಲ್ಲೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಕರೆ ನೀಡಿಲ್ಲ. ಇದರಿಂದ ವಿಜಯ ಶಾಂತಿ ಕಾಂಗ್ರೆಸ್ ನಿಂದ ದೂರಸರಿದಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ.

ಈ ನಡುವೆ ಕಳೆದ ಸೋಮವಾರ ಹೈದೆರಾಬಾದ್ ನ ಜ್ಯೂಬಿಲಿ ಹಿಲ್ಸ್ ನಲ್ಲಿರುವ ವಿಜಯ ಶಾಂತಿ ನಿವಾಸಕ್ಕೆ ತೆರಳಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಸುಮಾರು ಅರ್ಧ ತಾಸು ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅಲ್ಲದೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕೂಡ ಕೆಲವು ದಿನಗಳ ಹಿಂದೆ ವಿಜಯಶಾಂತಿ ಅವರನ್ನು ಭೇಟಿಯಾಗಿದ್ದರು ಎಂದು ವರದಿಯಾಗಿದೆ. ವಿಜಯಶಾಂತಿ ನವೆಂಬರ್ 10 ರೊಳಗೆ ದೆಹಲಿ ಹಿರಿಯರ ಸಮ್ಮುಖದಲ್ಲಿ ಬಿಜೆಪಿಗೆ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯಶಾಂತಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಖ್ಯಾತ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿ. ಕೆಲ ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 180 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕೆರಳಿದ ಹೆಣ್ಣು, ಸಿಂಹ ಘರ್ಜನೆ ಮತ್ತು ವಂದೇ ಮಾತರಂ ಚಿತ್ರಗಳಲ್ಲಿ ನಟಿಸಿದ್ದಾರೆ. 2009 ರಿಂದ 2014 ಮೇಡಕ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

- Advertisement -

Latest News

error: Content is protected !!