Friday, June 5, 2026
Homeತಾಜಾ ಸುದ್ದಿಮಂಡ್ಯದಲ್ಲಿ 'ಮಾರಮ್ಮನ ಪ್ರಸಾದ' ಸೇವನೆ: 70ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮಂಡ್ಯದಲ್ಲಿ ‘ಮಾರಮ್ಮನ ಪ್ರಸಾದ’ ಸೇವನೆ: 70ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

- Advertisement -
- Advertisement -

ಮಂಡ್ಯ : ಕಳೆದ ರಾತ್ರಿ ಮಾರಮ್ಮನ ದೇವಾಲಯದಲ್ಲಿ ವಿತರಿಸಲು ಮಾಡಿದ್ದಂತ ಪುಳಿಯೊಗರೆ ಪ್ರಸಾದ ಸೇವಿಸಿದಂತ 70ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿನ ಮಾರಮ್ಮನ ದೇವಾಲಯದಲ್ಲಿ ನಿನ್ನೆ ರಾತ್ರಿ ಪ್ರಸಾದದ ರೂಪದಲ್ಲಿ ಪುಳಿಯೊಗರೆಯನ್ನು ದೇವಾಲಯದಲ್ಲಿ ನೆರೆದಿದ್ದಂತ ಭಕ್ತಾದಿಗಳಿಗೆ ಹಂಚಲಾಗಿತ್ತು. ಇಂತಹ ಪ್ರಸಾದ ಸೇವಿಸಿದಂತ 70ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಸಾದ ಸೇವಿಸಿ ಹೊಟ್ಟೆ ನೋವು, ವಾಂತಿ ಮಾಡಿಕೊಂಡ 70ಕ್ಕೂ ಹೆಚ್ಚು ಅಸ್ವಸ್ಥಗೊಂಡ ಜನರನ್ನು ಕೂಡಲೇ ಮಳವಳ್ಳಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಹಲಗೂರು ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

- Advertisement -

Latest News

error: Content is protected !!