Friday, June 5, 2026
Homeತಾಜಾ ಸುದ್ದಿ65ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗುತ್ತಿದ್ದಾರೆ ಹಿರಿಯ ವಕೀಲ ಹರೀಶ್ ಸಾಳ್ವೆ

65ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗುತ್ತಿದ್ದಾರೆ ಹಿರಿಯ ವಕೀಲ ಹರೀಶ್ ಸಾಳ್ವೆ

- Advertisement -
- Advertisement -

ನವದೆಹಲಿ: 65 ವರ್ಷದ ಹಿರಿಯ ವಕೀಲ, ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಲಂಡನ್ ಮೂಲದ ಕಲಾವಿದೆಯ ಜೊತೆ ಎರಡನೇ ಮದುವೆಯಾಗಲಿದ್ದಾರೆ.  

ಜೂನ್ ತಿಂಗಳಿನಲ್ಲಿ ಮೊದಲ ಪತ್ನಿ ಮೀನಾಕ್ಷಿ ಅವರಿಗೆ ಸಾಳ್ವೆ ವಿಚ್ಛೇದನ ನೀಡಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮಗಳು 37 ವರ್ಷದ ಸಾಕ್ಷಿ, ಎರಡನೇ ಮಗಳು 33 ವರ್ಷದ ಸಾನಿಯಾ. ಬ್ರಿಟನ್‌ನಲ್ಲಿ ಜನಿಸಿದ ಕ್ಯಾರೋಲಿನ್ ಅವರಿಗೆ 18 ವರ್ಷದ ಮಗಳಿದ್ದಾಳೆ. ಕಲೆಯ ಬಗ್ಗೆ ಒಲವಿರುವ ನಮಗಿಬ್ಬರಿಗೂ ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಯ ಬಗ್ಗೆ ಆಸಕ್ತಿ ಇದೆ ಎಂದು ಸಾಳ್ವೆ ತಿಳಿಸಿದ್ದಾರೆ.

ಕೋವಿಡ್‌ 19 ಬಿಗಿ ನಿಯಮದ ಹಿನ್ನೆಲೆಯಲ್ಲಿ ಲಂಡನ್ ನಲ್ಲಿ 15 ಜನರು ಮಾತ್ರವೇ ಸೇರಲು ಅವಕಾಶ ಇರುವ ಕಾರಣ ಅತ್ಯಂತ ಸರಳವಾಗಿ ಮದುವೆ ನಡೆಯಲಿದೆ. ಈ ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ ಕ್ವೀನ್ಸ್ ಕೌನ್ಸೆಲ್ ಆಗಿ ಸಾಳ್ವೆ ನೇಮಕಗೊಂಡಿದ್ದರು.

ಇನ್ನು ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಲು ಕೇವಲ 1 ರೂ. ಶುಲ್ಕ ಪಡೆಯುವ ಮೂಲಕ ಸುದ್ದಿಯಾಗಿದ್ದರು ಹಿರಿಯ ವಕೀಲ ಹರೀಶ್ ಸಾಳ್ವೆ. ಅಲ್ಲದೇ ದೇಶದ ಹೈ ಪ್ರೊಫೈಲ್‌ ಪ್ರಕರಣಗಳ ಪರವಾಗಿ ಸಾಳ್ವೆ ವಾದ ಮಂಡಿಸಿದ್ದರು. ಮುಕೇಶ್‌ ಅಂಬಾನಿ, ರತನ್‌ ಟಾಟಾ, ಐಟಿಸಿ ಹೋಟೆಲ್‌, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಹಿಟ್‌ ಆಂಡ್‌ ರನ್‌ ಪ್ರಕರಣದಲ್ಲಿ ವಾದಿಸಿದ್ದರು.

- Advertisement -

Latest News

error: Content is protected !!