Thursday, June 4, 2026
Homeತಾಜಾ ಸುದ್ದಿರಸ್ತೆ ದಾಟುತ್ತಿದ್ದ ಜಿಂಕೆಗೆ ಬೈಕ್ ಢಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ ಜಿಂಕೆ- ಬೈಕ್ ಸವಾರ ಗಂಭೀರ!..

ರಸ್ತೆ ದಾಟುತ್ತಿದ್ದ ಜಿಂಕೆಗೆ ಬೈಕ್ ಢಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ ಜಿಂಕೆ- ಬೈಕ್ ಸವಾರ ಗಂಭೀರ!..

- Advertisement -
- Advertisement -

ಹುಣಸೂರು: ಇಲ್ಲಿನ ಹುಣಸೂರು- ನಾಗರಹೊಳೆ ರಸ್ತೆಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬಳಿ ಬೈಕ್ ಢಿಕ್ಕಿ ಹೊಡೆದು ರಸ್ತೆದಾಟುತ್ತಿದ್ದ ಜಿಂಕೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಕ್ ಸವಾರನಿಗೆ ಗಂಭೀರವಾಗಿ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಯುವಕನನ್ನು ಹುಣಸೂರು ನಗರದ ಕಲ್ಕುಣಿಕೆ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ.

ನಾಗಾಪುರ ಬಳಿಯ ಉಡ್ ಲಾಟ್ ಕಡೆಯಿಂದ ಜಿಂಕೆ ಹೊರಬಂದು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಬೈಕ್ ಸವಾರ ಸಂತೋಷ್ ಗೆ ತಲೆಗೆ ತೀವ್ರಪೆಟ್ಟು ಬಿದ್ದಿದ್ದು,ಆತ ರಸ್ತೆಗೆಸೆಯಲ್ಪಟ್ಟಿದ್ದಾನೆ.

- Advertisement -

Latest News

error: Content is protected !!