Friday, June 5, 2026
Homeಕರಾವಳಿಭಾರತ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ಜಯ ಸಿ ಸುವರ್ಣ ಇನ್ನಿಲ್ಲ!..

ಭಾರತ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ಜಯ ಸಿ ಸುವರ್ಣ ಇನ್ನಿಲ್ಲ!..

- Advertisement -
- Advertisement -

ಮಂಗಳೂರು:ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಸ್ಥಾಪಕ, ಭಾರತ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಜಯ ಸಿ ಸುವರ್ಣ (74) ಅವರುಇಂದು ಮುಂಜಾನೆ ಮುಂಬಯಿಯಲ್ಲಿ ನಿಧನ ಹೊಂದಿದರು.ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜಯ ಸಿ ಸುವರ್ಣ ಭಾರತ್ ಬ್ಯಾಂಕ್ ಲಿ. ನ ಮಾಜಿ ಅಧ್ಯಕ್ಷರಾಗಿ ದುಡಿದವರು.

ನಾರಾಯಣ ಗುರು ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್ ನ ಪ್ರವರ್ತಕರಾಗಿ ಸೇವೆಸಲ್ಲಿಸಿದ್ದು ಅವರು ಆಡಳಿತ ಸಮಿತಿ ಗೌರವಾಧ್ಯಕ್ಷರಾಗಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ, ಗೆಜ್ಜೆಗಿರಿ ನಂದನ ಬಿತ್ತಿಲ್ ನ ಗೌರವಾಧ್ಯಕ್ಷರಾಗಿ ಹಲವು ಪ್ರಗತಿಪರ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು.ಇವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಬಿ.‌ಜನಾರ್ದನ ಪೂಜಾರಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

‌ಮೃತರು ಪತ್ನಿ ಲೀಲಾವತಿ ಜಯ ಸುವರ್ಣ, ಮಕ್ಕಳಾದ ಸೂರ್ಯಕಾಂತ್ ಜೆ. ಸುವರ್ಣ, ಸುಭಾಶ್ ಜೆ. ಸುವರ್ಣ, ದಿನೇಶ್ ಜೆ. ಸುವರ್ಣ, ಯೋಗೇಶ್ ಜೆ. ಸುವರ್ಣ ಅವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!