Friday, June 5, 2026
Homeಕರಾವಳಿರೆಖ್ಯ: ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ

ರೆಖ್ಯ: ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ

- Advertisement -
- Advertisement -

ಕೊಕ್ಕಡ: ರೆಖ್ಯ ಗ್ರಾಮದ ಕೋಲಾರಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪಾದುಕಾನ್ಯಾಸ ಕಾರ್ಯಕ್ರಮವು ಶಾಸಕ ಹರೀಶ್ ಪೂಂಜರ ಗಣ್ಯ ಉಪಸ್ಥಿತಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅನುವಂಶಿಕ ಮೊಕ್ತೇಸರ ರಾಮಯ್ಯ ಗೌಡ ಕೋಲಾರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕುಶಾಲಪ್ಪಗೌಡ ಪಾಪುದಮಂಡೆ, ಜೀರ್ಣೋಧ್ಧಾರ ಸಮಿತಿಯ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ, ಶೀನಪ್ಪ ರೈ ಬಳ್ಳಾಲ್ ಗುತ್ತು, ಅಡೆಂಜ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ ರಾಧಾಕೃಷ್ಣ ಗೌಡ, ಅರ್ಚಕರಾದ ಪ್ರಶಾಂತ್ ಭಟ್, ಶಿಲ್ಪಿಗಳಾದ ಈಶ್ವರ್ ಚಂದ್ರ ಶಿಲ್ಪಿಗಳು, ಹಾಗೂ ಅತಿಥಿಗಳಾಗಿ ರಕ್ಷಿತ್ ಶೆಟ್ಟಿ ಪಣಿಕ್ಕೆರ, ಬಾಲಕೃಷ್ಣ ಗೌಡ ಮುಗೇರಡ್ಕ, ಸುದೀರ್ ಭಟ್, ರತೀಶ್ ಬೇಂಗಳ ,ನವೀನ್ ಕೆ ರೆಖ್ಯ ಉಪಸ್ಥಿತರಿದ್ದರು.

ವಸಂತಗೌಡ ಗುಡ್ರಾದಿ ಅತಿಥಿಗಳನ್ನು ಸ್ವಾಗತಿಸಿ, ಯು ಆರ್ ನಾರಾಯಣಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು ಕಾರ್ಯಕ್ರಮದ ನಿರೂಪಣೆಯನ್ನು ಚೇತನ್ ಪಿ ಕೆಯವರು ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಪವಿತ್ರ ರವರು ಧನ್ಯವಾದವನ್ನಿತ್ತರು.

- Advertisement -

Latest News

error: Content is protected !!