Sunday, June 7, 2026
Homeಕರಾವಳಿರೌಡಿಶೀಟರ್ ಮನೀಷ್ ಶೆಟ್ಟಿ ಹತ್ಯೆ ಪ್ರಕರಣ: ನಾಲ್ವರು‌ ಆರೋಪಿಗಳು ಅಂದರ್

ರೌಡಿಶೀಟರ್ ಮನೀಷ್ ಶೆಟ್ಟಿ ಹತ್ಯೆ ಪ್ರಕರಣ: ನಾಲ್ವರು‌ ಆರೋಪಿಗಳು ಅಂದರ್

- Advertisement -
- Advertisement -

ಬೆಂಗಳೂರು: ಬೆಂಗಳೂರು ಶೂಟೌಟ್ ನಲ್ಲಿ‌ ಮನೀಶ್ ಶೆಟ್ಟಿ ಕೊಲೆ ಪ್ರಕರಣ.
ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು.
ಮಡಿಕೇರಿ ಮೂಲದ ಮುನ್ನ ಅಲಿಯಾಸ್ ನಾಗಭೂಷನ್ ಅಲಿಯಾಸ್ ಶಶಿ ಅಲಿಯಾಸ್ ಆಶ್ರಫ್ ಅಲಿಯಾಸ್ ಕಿರಣ್ ಬಂಧನ.
ಮುನ್ನನ ಜೊತೆ ಮೂರು ಜನರನ್ನು ಬಂಧಿಸಿದ ಪೊಲೀಸರು.
ನಿನ್ನೆ ತಡರಾತ್ರಿ ಬಂಧಿಸಿರುವ ಬೆಂಗಳೂರು ಪೊಲೀಸರು.

ಮುಲತಃ ಮಡಿಕೇರಿ ಮೂಲದ ನಿವಾಸಿಯಾದ ಪೊಲೀಸ್ ಇಲಾಖೆಯ KSRP‌ ಎಎಸ್ಐ ಒಬ್ಬರ ಮಗನಾದ ಮುನ್ನ ಅಲಿಯಾಸ್ ನಾಗಭೂಷನ್ ಅಲಿಯಾಸ್ ಶಶಿ ಅಲಿಯಾಸ್ ಆಶ್ರಫ್ ಅಲಿಯಾಸ್ ಕಿರಣ್ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ರೌಡಿಶೀಟರ್ ಹಾಗೂ ಮೂವರನ್ನು ಪೊಲೀಸರು‌ ನಿನ್ನೆ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ .ಇವರು ಮನೀಷ್ ಶೆಟ್ಟಿಯನ್ನು ಮರ್ಡರ್ ಮಾಡಿರುವ ಶಂಕೆ ಇದ್ದು ವಿಚಾರಣೆಯಿಂದ ಬಯಲಾಗಬೇಕಾಗಿದೆ.

ಮಡಿಕೇರಿಯ ಮುನ್ನ 1999 ರಲ್ಲಿ ಮಂಗಳೂರು ನಗರದ ಉಳ್ಳಾದ ಕೆ.ಸಿ.ರೋಡಿನಲ್ಲಿ ನಡೆದ ಅಣ್ಣ-ತಮ್ಮ‌ದಿರ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದ.

ಒಂದು ಕಾಲದಲ್ಲಿ ಮುಲ್ಕಿ ರಫೀಕ್ ನ ಬಲಗೈ ಬಂಟನಾಗಿದ್ದ ಕೆಲಸ‌ ಮಾಡುತ್ತಿದ್ದ ಅದೆ ಸಂದರ್ಭದಲ್ಲಿ ಡಬ್ಬಲ್ ಮಾರ್ಡರ್ ಮುಲ್ಕಿ ರಫೀಕ್ ಜೊತೆ ಸೇರಿ‌ ಮಾಡಿದ್ದ.

ಇನ್ನೂ ಈ ಮನೀಷ್ ಶೆಟ್ಟಿ ಕೊಲೆ‌ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಯಾವ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬರಬೇಕಾಗಿದೆ.

- Advertisement -

Latest News

error: Content is protected !!