Monday, May 20, 2024
Homeತಾಜಾ ಸುದ್ದಿಮೊಬೈಲ್ ಗಿಫ್ಟ್ ಕೊಡದ್ದಕ್ಕೆ ಅಜ್ಜಿಯ ಕತ್ತು ಸೀಳಿದ ಪಾಪಿ ಮೊಮ್ಮಗ: ಕೊಲೆ ಮಾಡಿ ಕತ್ತನ್ನು ಟೇಬಲ್...

ಮೊಬೈಲ್ ಗಿಫ್ಟ್ ಕೊಡದ್ದಕ್ಕೆ ಅಜ್ಜಿಯ ಕತ್ತು ಸೀಳಿದ ಪಾಪಿ ಮೊಮ್ಮಗ: ಕೊಲೆ ಮಾಡಿ ಕತ್ತನ್ನು ಟೇಬಲ್ ಮೇಲಿಟ್ಟ ಕ್ರೂರಿ

spot_img
- Advertisement -
- Advertisement -

ಮುಂಬೈಃ  ಮೊಬೈಲ್ ಅನ್ನೋ ಮಾಯೆ ಏನೆಲ್ಲಾ ಮಾಡಿಸಿ ಬಿಡುತ್ತೆ ಅಂತಾ ಹೇಳೋದಕ್ಕೆ ಹತ್ತಾರು ಉದಾಹರಣೆಗಳನ್ನು ನೀವು ನೋಡಿರುತ್ತೀರಿ. ಆದರೆ ಮೊಬೈಲ್ ಮೋಹಕ್ಕೆ ಬಿದ್ದ ಯುವಕನೊಬ್ಬ ತನ್ನ ಅಜ್ಜಿಯನ್ನೇ ಕೊಲೆಗೈದಿದ್ದಾನೆ.

ಯೆಸ್.. ತನ್ನ ಅಜ್ಜಿ  ಮೊಬೈಲ್ ಗಿಫ್ಟ್ ಕೊಟ್ಟಿಲ್ಲ ಅನ್ನೋ ಕೋಪದಿಂದ ಮುಂಬೈನಲ್ಲಿ 24 ವರ್ಷದ ಯುವಕನೊಬ್ಬ ಅಜ್ಜಿಯನ್ನೇ ಕೊಲೆಗೈದಿದ್ದಾನೆ. ಮುಂಬೈನ ಪಶ್ಚಿಮ ಬಾಂದ್ರಾದಲ್ಲಿ ಘಟನೆ ನಡೆದಿದ್ದು, ಆರೋಪಿ ಡ್ರಗ್ಸ್ ಅಡಿಕ್ಟ್ ಆಗಿದ್ದ, ಅಲ್ಲದೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.

ಇನ್ನು ಕೊಲೆ ಆರೋಪಿಯನ್ನು ಕ್ರಿಸ್ಟೋಫರ್ ಡಯಾಸ್ ಎಂದು ಗುರುತಿಸಲಾಗಿದೆ. ಈತ ಥಾಣೆಯಲ್ಲಿರುವ ರೆಹಾಬ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆಗೆ ಹಣದ ಕೊರತೆ ಉಂಟಾಗಿ ಕೆಲ ದಿನಗಳ ಹಿಂದೆ ಪೋಷಕರು ಆತನನ್ನು ಮನೆಗೆ ಕರೆ ತಂದಿದ್ದರು. ಡಯಾಸ್‍ನ ಪೋಷಕರು ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಕುಟುಂಬದ ಇತರ ಸದಸ್ಯರು ನೆಲ ಮಹಡಿಯಲ್ಲಿದ್ದರು. ಇನ್ನು ಮೃತ ಅಜ್ಜಿಯನ್ನು ರೋಸಿ ಎಂದು ಗುರುತಿಸಲಾಗಿದೆ.

ರಾತ್ರಿ ಊಟದ ಬಳಿಕ ಆರೋಪಿ ಅಜ್ಜಿಯ ಬಳಿ ತೆರಳಿದ್ದು, ಈ ವೇಳೆ ಮೊಬೈಲ್ ಗಿಫ್ಟ್ ನೀಡುವಂತೆ ಅಜ್ಜಿಯನ್ನು ಕೇಳಿದ್ದಾನೆ. ಆದರೆ ಅಜ್ಜಿ ರೋಸಿ ಮೊಮ್ಮಗನ ಬೇಡಿಕೆಯನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಿತನಾದ ಆರೋಪಿ ಅಜ್ಜಿಯನ್ನೇ ಕೊಲೆ ಮಾಡಿದ್ದಾನೆ. ಅಜ್ಜಿ ಮಲಗಿದ ಬಳಿಕ ಹೊಂಚು ಹಾಕಿ ಆಕೆಯ ತಲೆಯನ್ನೇ ಕತ್ತರಿಸಿ ಕೊಲೆ ಮಾಡಿದ್ದಾನೆ. ಅಲ್ಲದೆ ಕತ್ತರಿಸಿದ ತಲೆಯನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ವಿಕೃತಿ ಮೆರೆದಿದ್ದಾನೆ.

ಇನ್ನು ಸ್ವಲ್ಪ ಹೊತ್ತಿನಲ್ಲಿ ಆರೋಪಿ ಡಯಾಸ್ ಸೋದರ ಸಂಬಂಧಿ ನೆಲ ಮಹಡಿಗೆ ಬಂದು ನೋಡಿದ್ದಾರೆ. ಈ ವೇಳೆ ಮನೆಯ ತುಂಬಾ ರಕ್ತ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಡಯಾಸ್ ತಂದೆಯನ್ನು ಕರೆದಿದ್ದು, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅಕ್ಟೋಬರ್ 17ರ ವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

- Advertisement -
spot_img

Latest News

error: Content is protected !!