Friday, June 5, 2026
Homeತಾಜಾ ಸುದ್ದಿಬನ್ನಿ ಒಮ್ಮೆ ಕೈ ತೊಳೆದು ಬಿಡೋಣ!.. ಇಂದು ಗ್ಲೋಬಲ್ ಹ್ಯಾಂಡ್ ವಾಶಿಂಗ್ ಡೇ;

ಬನ್ನಿ ಒಮ್ಮೆ ಕೈ ತೊಳೆದು ಬಿಡೋಣ!.. ಇಂದು ಗ್ಲೋಬಲ್ ಹ್ಯಾಂಡ್ ವಾಶಿಂಗ್ ಡೇ;

- Advertisement -
- Advertisement -

ಬೆಂಗಳೂರು:ಇಂದು ಗ್ಲೋಬಲ್ ಹ್ಯಾಂಡ್ ವಾಶಿಂಗ್ ಡೇ ಕೈತೊಳೆಯುವುದರಿಂದ ಆರೋಗ್ಯ ಸುಧಾರಣೆ ಮಾತ್ರವಲ್ಲದೆ ನಮ್ಮನ್ನು ನಾವು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿ ಕೊಳ್ಳಬಹುದು. ಈಗಿನ ಕೊರೋನಾ ಸಮಸ್ಯೆಗಳ ನಡುವೆ ಈ ದಿನದ ಪ್ರಸ್ತುತತೆ ಹೆಚ್ಚಾಗಿಯೇ ಇದೆ. ಕೈ ತೊಳೆಯುವುದು ಎಂದರೆ ಕಾಟಾಚಾರಕ್ಕಲ್ಲ ನೀವು ಕೈಗಳನ್ನು ಹೇಗೆ ತೊಳೆಯಬೇಕು ಎಂದು ತಿಳಿದಿರಬೇಕು.
ಗ್ಲೋಬಲ್ ಹ್ಯಾಂಡ್ ವಾಶಿಂಗ್ ಡೇ ಅಂತಾರಾಷ್ಟ್ರೀಯ ಅಭಿಯಾನವು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ, ಈ ಮೂಲಭೂತ ಅಭ್ಯಾಸವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಕರೋನಾದ ಈ ಸಮಯದಲ್ಲಿ ಎಲ್ಲರೂ ಪಾಲಿಸಬೇಕಾಗಿದೆ.
ಕೈತೊಳೆಯುವ ಅಭ್ಯಾಸವನ್ನು ಸುಧಾರಿಸಲು ವಿಶ್ವದಾದ್ಯಂತ ಜನರು ಸಹಾಯ ಮಾಡಲು ಪ್ರತಿ ವರ್ಷ ಅಕ್ಟೋಬರ್ 15 ರಂದು ಗ್ಲೋಬಲ್ ಹ್ಯಾಂಡ್ ವಾಶಿಂಗ್ ದಿನವನ್ನು ಆಚರಿಸುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ನೀವು ಶುದ್ಧ ನೀರು ಮತ್ತು ಸಾಬೂನು ಬಳಸಿ ಕನಿಷ್ಠ 40 ರಿಂದ 60 ಸೆಕೆಂಡುಗಳ ಕಾಲ ಕೈ ತೊಳೆಯಬೇಕು.

- Advertisement -

Latest News

error: Content is protected !!