Friday, June 5, 2026
Homeತಾಜಾ ಸುದ್ದಿಕೋಳಿ ಫಾರಂನಲ್ಲಿ ಕೂಡಿಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ!…

ಕೋಳಿ ಫಾರಂನಲ್ಲಿ ಕೂಡಿಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ!…

- Advertisement -
- Advertisement -

ಒಡಿಶಾ: ಇಲ್ಲಿನ ಜಗತ್ ಸಿಂಗ್ ಪುರ್ ಜಿಲ್ಲೆಯ ಟಿರ್ಟಾಲ್ ನಲ್ಲಿ ಪೋಷಕರೊಂದಿಗೆ ಜಗಳವಾಡಿ ಮನೆಯಿಂದ ಓಡಿಹೋಗಿದ್ದ 17 ವರ್ಷದ ಬಾಲಕಿಯನ್ನು ಕೋಳಿ ಫಾರಂನಲ್ಲಿ ಕೂಡಿಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

ಓಎಂಸಿ ಸ್ಕ್ವೇರ್ ನಲ್ಲಿರುವ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿ ಮೋಸದಿಂದ ಚೌಲಿಯಾಗಂಜ್ ಪೊಲೀಸ್ ಠಾಣೆ ಪ್ರದೇಶದ ಗತಿರೌಟ್ ಪಾಟ್ನಾ ಗ್ರಾಮದಲ್ಲಿರುವ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಕರೆದೊಯ್ದು ಬಲವಂತವಾಗಿ 22 ದಿನ ಕೂಡಿ ಹಾಕಿದ್ದಾರೆ. ಇಬ್ಬರು ಪುರುಷರು ಪದೇಪದೇ ಅತ್ಯಾಚಾರ ಎಸಗಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ದಿಢೀರ್ ದಾಳಿ ನಡೆಸಿ ಹುಡುಗಿಯನ್ನು ರಕ್ಷಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ.ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಅನಾಥಾಶ್ರಮಕ್ಕೆ ಕಳುಹಿಸಲಾಗಿದೆ.

- Advertisement -

Latest News

error: Content is protected !!