Friday, June 5, 2026
Homeತಾಜಾ ಸುದ್ದಿರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ

ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ

- Advertisement -
- Advertisement -

ಬೆಂಗಳೂರು: ನವೆಂಬರ್​ 3ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಟಿಕೆಟ್​ ಘೋಷಣೆಯಾಗಿದೆ. ಶಿರಾ ಉಪ ಚುನಾವಣೆಗೆ ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡಿದ್ದರೇ, ರಾಜರಾಜೇಶ್ವರಿಗೆ ನಗರಕ್ಕೆ ಮುನಿರತ್ನಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಇಂದು ರಾಜರಾಜೇಶ್ವರಿ ಕ್ಷೇತ್ರದ ಉಪ ಚುನಾವಣೆ ಇದ್ದಂತ ಅಡ್ಡಿಯನ್ನು ಸುಪ್ರೀಂ ಕೋರ್ಟ್ ನಿವಾರಿಸಿತ್ತು. ತುಳಸಿ ಮುನಿರಾಜುಗೌಡ ಸಲ್ಲಿಸಿದ್ದಂತ ಅರ್ಜಿಯನ್ನು ವಜಾಗೊಳಿಸಿತ್ತು. ಇದರಿಂದಾಗಿ ಇದೀಗ ಬಿಜೆಪಿ ಟಿಕೆಟ್ ಕೂಡ ಘೋಷಣೆಯಾಗಿದೆ.

ಅತ್ತ ಸಿರಾ ಕ್ಷೇತ್ರದಲ್ಲಿ ರಾಜೇಶ್​ಗೌಡ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ರಾಜೇಶ್​ಗೌಡ ಜೆಡಿಎಸ್​ ಪಕ್ಷದೊಂದಿಗೆ ಕಾಣಿಸಿಕೊಂಡಿದ್ದರು. ಇವರ ತಂದೆ ಕಾಂಗ್ರೆಸ್​ ಪಕ್ಷದಲ್ಲಿದ್ದರು. ಇತ್ತೀಚೆಗೆ ರಾಜೇಶ್​ಗೌಡ ಬಿಜೆಪಿ ಸೇರಿದ್ದರು. ಇದೀಗ ಶಿರಾ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ಸಿಕ್ಕಿದೆ. ರಾಜೇಶ್​ಗೌಡ ಬಿಜೆಪಿ ಸೇರಲು ನೀವೇ ಕಾರಣ, ನೀವೇ ಕಾರಣ ಅಂತ ಇತ್ತೀಚೆಗೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕಿತ್ತಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

- Advertisement -

Latest News

error: Content is protected !!