Sunday, May 19, 2024
Homeತಾಜಾ ಸುದ್ದಿನಟಿ ಪ್ರಣೀತಾರನ್ನು ಅಂಬಾಸಿಡರ್ ಮಾಡುವುದಾಗಿ ನಂಬಿಸಿ ಲಕ್ಷ ಲಕ್ಷ ವಂಚನೆ – ರೂಮಿನೊಳಗೆ ಹೋಗ್ತೀವಿ ಎಂದು...

ನಟಿ ಪ್ರಣೀತಾರನ್ನು ಅಂಬಾಸಿಡರ್ ಮಾಡುವುದಾಗಿ ನಂಬಿಸಿ ಲಕ್ಷ ಲಕ್ಷ ವಂಚನೆ – ರೂಮಿನೊಳಗೆ ಹೋಗ್ತೀವಿ ಎಂದು ಪರಾರಿ

spot_img
- Advertisement -
- Advertisement -

ಬೆಂಗಳೂರು: ಕನ್ನಡದಲ್ಲಿ ಪೊರ್ಕಿ ಸೇರಿದಂತೆ ದಕ್ಷಿಣ ಭಾರತದ ಹಲವು ಹಿಟ್ ಸಿನೆಮಾಗಳಲ್ಲಿ ನಟಿಸಿದ್ದ ಜನಪ್ರೀಯ ನಟಿ ಪ್ರಣೀತಾ ಸುಭಾಷ್ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ ನಂಬಿಸಿ ಖದೀಮರು ಹೈದರಾಬಾದ್ ಮೂಲದ ಎಸ್.ವಿ ಗ್ರೂಪ್ ಬಿಲ್ಡರ್ಸ್ ಆಯಂಡ್ ಡೆವಲಪರ್ಸ್ ಕಂಪನಿಗೆ ಲಕ್ಷಾಂತರ ವಂಚನೆ ಮಾಡಿ ಪರಾರಿಯಾಗಿರುವ ಪ್ರಕರಣ ಬೆಂಗಳೂರಿನ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಂಪನಿಗೆ ಲಕ್ಷಾಂತರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಜೂನಾಯತ್ ಹಾಗೂ ವರ್ಷಾ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ನಗರದ ಖಾಸಗಿ ಹೋಟೇಲ್ ಗೆ ಎಸ್.ವಿ.ಗ್ರೂಪ್ ಮ್ಯಾನೇಜರ್ ಅವರನ್ನು ಕರೆಸಿಕೊಂಡಿದ್ದ ಆರೋಪಿಗಳು ನಾವು ನಟಿ ಪ್ರಣೀತಾಳ ಮ್ಯಾನೇಜರ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ನಟಿಯನ್ನು ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿ ವ್ಯವಹಾರ ಕುದುರಿಸಿದ್ದಾರೆ.

ನೀವು ಹಣ ನೀಡಿದರೆ ಪ್ರಣೀತಾ ಇನ್ನೊಂದು ಗಂಟೆಯಲ್ಲಿ ಬಂದು ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ನೀವು 13.5 ಲಕ್ಷ ರೂ. ಪಾವತಿಸಿ ಎಂದು ಹೇಳಿದ್ದು ಆರೋಪಿಗಳ ಮಾತು ನಂಬಿ ಮ್ಯಾನೇಜರ್ 13.5 ಲಕ್ಷ ರೂ. ನೀಡಿದ್ದಾರೆ. ಹಣ ಪಡೆಯುತ್ತಿದ್ದಂತೆ ರೂಮ್ ಒಳಗೆ ಹೋಗಿ ಬರುವುದಾಗಿ ಹೇಳಿ ಆರೋಪಿಗಳು ಪರಾರಿಯಾಗಿದ್ದಾರೆ.

ಪ್ರಕರಣ ನಡೆಯುತ್ತಿದ್ದಂತೆ ಸಂಸ್ಥೆಯ ಮ್ಯಾನೇಜರ್ ಆರೋಪಿಗಳಾದ ಮಹಮ್ಮದ್ ಜೂನಾಯತ್ ಹಾಗೂ ವರ್ಷಾ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಇದೀಗ ಎಫ್‍ಐಆರ್ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!