Friday, April 26, 2024
Homeಕರಾವಳಿವಿಟ್ಲ: 11 ವರ್ಷ ಪ್ರೀತಿಸಿದ ಯುವತಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಬೇರೊಬ್ಬ ಯುವತಿಯೊಂದಿಗೆ ಮದುವೆಯಾದ ಪಿಎಫ್ಐ...

ವಿಟ್ಲ: 11 ವರ್ಷ ಪ್ರೀತಿಸಿದ ಯುವತಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಬೇರೊಬ್ಬ ಯುವತಿಯೊಂದಿಗೆ ಮದುವೆಯಾದ ಪಿಎಫ್ಐ ಕಾರ್ಯಕರ್ತ !

spot_img
- Advertisement -
- Advertisement -

ವಿಟ್ಲ: ಯುವಕನೊಬ್ಬ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಬಳಿಕ ಆಕೆಯ ಜತೆ ದೈಹಿಕ ಸಂಪರ್ಕ ನಡೆಸಿ ಬಳಿಕ ಬೇರೆ ಯುವತಿ ಜತೆ ಮದುವೆಯಾಗಿದ್ದು, ಈ ಬಗ್ಗೆ ನೊಂದ ಯುವತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ಮತ್ತು ಪಿಎಫ್ಐ ಸಂಘಟನೆಯ ಸಕ್ರಿಯ ಕಾರ್ಯಕರ್ತ ನಾಸೀರ್(30) ಎಂಬಾತ ವಿರುದ್ಧ ಮಾಣಿ ಸಮೀಪದ ಯುವತಿ ದೂರು ನೀಡಿದ್ದಾಳೆ. ನಾಸೀರ್ ನನ್ನನ್ನು 11 ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ನಡುವೆಯೂ 5 ವರ್ಷದ ಮೊದಲು ತನ್ನ ತಂಗಿಯ ಮದುವೆಗೆಂದು ಹೇಳಿ ನನ್ನಿಂದ 60 ಸಾವಿರ ರೂ. ಹಾಗೂ 40 ಸಾವಿರ ರೂ. ಮೊತ್ತದ ಚಿನ್ನವನ್ನು ಪಡೆದು ಹಿಂತಿರುಗಿಸರಲಿಲ್ಲ. ನನ್ನನ್ನು ವಿವಾಹವಾಗುವುದಾಗಿ ನಂಬಿಸಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿದ ಕುರಿತು ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುತ್ತಾನೆ. ಈ ಬಗ್ಗೆ ನಾನು ಯಾರಲ್ಲಿಯೂ ಈ ವಿಚಾರ ತಿಳಿಸಿರುವುದಿಲ್ಲ. ನಂತರ ವಿವಾಹವಾಗುತ್ತೇನೆ ಎಂದು ನಂಬಿಸಿ ಮತ್ತೆ ಎರಡು ಬಾರಿ ದೈಹಿಕ ಸಂಪರ್ಕ ಬೆಳೆಸಿರುತ್ತಾನೆ. ಮದುವೆಯಾಗುತ್ತಾನೇ ಎಂಬ ನಂಬಿಕೆಯಿಂದ ನಾನು ಯುವಕನ ಬಗ್ಗೆ ಯಾರಲ್ಲಿಯೂ ಹೇಳದೇ ಮುಚ್ಚಿಟ್ಟಿದ್ದು ಎಂದು ಹೇಳಿದ್ದಾಳೆ.

ಆದರೆ ಈ ದಿನ ಸೋಮವಾರ ಪಾಣೆಮಂಗಳೂರಿನ ಮದುವೆ ಹಾಲ್ ನಲ್ಲಿ ಬೇರೆ ಹುಡುಗಿ ಜತೆ ಮದುವೆ ಯಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. 11 ವರ್ಷದಿಂದ ಮದುವೆಯಾಗುವುದಾಗಿ ನಂಬಿಸಿ ಮೂರು ಬಾರಿ ದೈಹಿಕ ಸಂಪರ್ಕ ಮಾಡಿ ಈ ದಿನ ಆತ ಬೇರೆ ಯುವತಿ ಜತೆ ವಿವಾಹ ಆಗಿದ್ದರಿಂದ ಮನೆಯವರಿಗೆ ತಿಳಿಸಿದ್ದೇನೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಯುವತಿ ಹೆತ್ತವರೊಂದಿಗೆ ಬಂದು ವಿಟ್ಲ ಪೊಲೀಸ್ ಠಾಣೆಗೆ ಯುವಕನ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!