Thursday, June 4, 2026
Homeಕರಾವಳಿಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ!

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ!

- Advertisement -
- Advertisement -

ಮೂಡುಬಿದಿರೆ: ಕಡಂದಲೆ ಗ್ರಾಮದ ಉಮನಪಾಲು ಎಂಬಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋರ್ವರು ಶನಿವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬಾವಿಗೆ ಯಾರೂ ಇಳಿಯದಿದ್ದಾಗ, ಮೂಡುಬಿದಿರೆ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಬಾವಿಗಿಳಿದು, ಶವವನ್ನು ಬಾವಿಯಿಂದ ಹೊರಗೆ ತೆಗೆದಿದ್ದಾರೆ.

ವಿಜಯ ಕರ್ಕೇರ (47ವ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕಳೆದ 3-4 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ವಿಜಯ ಕರ್ಕೇರಾ ಮನೆಯಲ್ಲಿ ನಾಪತ್ತೆಯಾದಾಗ ಮನೆಯವರು ಹುಡುಕಾಡಿದ್ದಾರೆ. ಬಾವಿಯ ಬಳಿ ವಿಜಯ ಅವರ ವಸ್ತ್ರವಿರುವುದು ಕಂಡುಬಂದಿದ್ದು, ಬಾವಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.

ವಿಜಯ್ ಅವರ ಸಹೋದರ ಉದಯ ಪೂಜಾರಿ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದು ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!