Sunday, June 7, 2026
Homeಕ್ರೀಡೆಧೋನಿ ಪುತ್ರಿ ಝೀವಾಳಿಗೆ ವಿಕೃತ ವ್ಯಕ್ತಿಯಿಂದ ಬೆದರಿಕೆ

ಧೋನಿ ಪುತ್ರಿ ಝೀವಾಳಿಗೆ ವಿಕೃತ ವ್ಯಕ್ತಿಯಿಂದ ಬೆದರಿಕೆ

- Advertisement -
- Advertisement -

ಶಾರ್ಜಾ: ಕೊರಾನಾ ಆರ್ಭಟದ ಮಧ್ಯೆಯೇ ಜನ ಐಪಿಎಲ್ ಎಂಜಾಯ್ ಮಾಡುತ್ತಿದ್ದಾರೆ. ಕ್ರಿಕೆಟಿಗರು ಕೂಡ ಅಭಿಮಾನಿಗಳಿಗೆ ಸಖತ್ ಮನೋರಂಜನೆ ಕೊಡುತ್ತಿದ್ದಾರೆ. ಬಹುತೇಕರು ಟಿವಿಯಲ್ಲಿ ಆಟ ನೋಡಿ ಎಂಜಾಯ್ ಮಾಡುತ್ತಿದ್ದರೆ, ತಾವು ಬೆಂಬಲಿಸಿದ್ದ ತಂಡ ಪರಾಭವಗೊಂಡ ಕಾರಣಕ್ಕೆ ಆ ತಂಡದ ಆಟಗಾರರ ವಿರುದ್ಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೀಗಿರುವಾಗಲೇ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಪರಾಭವಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಿ. ವಿಜಯ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆ ಹೊಂದಿರುವ ವಿಕೃತ ವ್ಯಕ್ತಿಯೊಬ್ಬ ಮಹೇಂದ್ರ ಸಿಂಗ್ ಧೋನಿ ಪುತ್ರಿ ಐದು ವರ್ಷದ ಝೀವಾಳಿಗೆ ಬೆದರಿಕೆ ಹಾಕಿದ್ದಾನೆ.

ಅದು ಕೂಡ ಅಂತಿಂಥ ಬೆದರಿಕೆ ಅಲ್ಲ. ಅತ್ಯಾಚಾರ ಹಾಗೂ ಕೊಲೆ ಬೆದರಿಕೆ. ಇದೀಗ ಬೆದರಿಕೆ ಹಾಕಿದ್ದ ವಿಕೃತನ ವಿರುದ್ಧ ಜಾಲತಾಣದಲ್ಲಿ ದೊಡ್ಡ ಮಟ್ಟದ ಖಂಡನೆ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!