Saturday, June 13, 2026
Homeತಾಜಾ ಸುದ್ದಿಜೈಲಾಧಿಕಾರಿಗಳ ಎದುರೇ ಸಂಜನಾ – ರಾಗಿಣಿ ಫೈಟ್, ಬೇರೆ ಬೇರೆ ಕೊಠಡಿಗೆ ಶಿಫ್ಟ್

ಜೈಲಾಧಿಕಾರಿಗಳ ಎದುರೇ ಸಂಜನಾ – ರಾಗಿಣಿ ಫೈಟ್, ಬೇರೆ ಬೇರೆ ಕೊಠಡಿಗೆ ಶಿಫ್ಟ್

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸಂಜನಾ ಹಾಗೂ ರಾಗಿಣಿ ಅವರನ್ನು ಆರಂಭದಲ್ಲಿ ವಶಕ್ಕೆ ಪಡೆದು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು. ಈ ವೇಳೆ ಅಲ್ಲಿ ರಾಗಿಣಿ ಹಾಗೂ ಸಂಜನಾ ನಡುವೆ ಮೊದಲ ದಿನವೇ ಜಗಳವಾಗಿತ್ತು. ಮತ್ತೆ ಎರಡೇ ದಿನಕ್ಕೆ ಅವರಿಬ್ಬರ ಜೀವ ಗೆಳತಿಯರು ಅನ್ನೋ ರೀತಿ ಜೊತೆಯಾಗಿದ್ದರು. ಆದರೆ ನಿನ್ನೆ ಮತ್ತೆ ಇಬ್ಬರ ನಡುವೆ ಕಿರಿಕ್ ಉಂಟಾಗಿದೆ.ಹೌದು.. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಗಿಣಿ ಹಾಗೂ ಸಂಜನಾ ಒಂದೇ ಕೊಠಡಿಯಲ್ಲಿದ್ದರು. ನಿನ್ನೆ ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ. ಜೈಲಿನ ಕೊಠಡಿಯಲ್ಲಿ ರಾಗಿಣಿ ಮತ್ತು ಸಂಜನಾ ನಡುವೆ ಗಲಾಟೆ ನಡೆದು, ಜೈಲು ಸಿಬ್ಬಂದಿ ಎದುರೇ ಇಬ್ಬರು ಕಿತ್ತಾಡಿಕೊಂಡಿದ್ದಾರೆ.
ಹೀಗಾಗಿ ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಪ್ರತ್ಯೇಕ ಕೊಠಡಿಗೆ ಶಿಫ್ಟ್ ಮಾಡಿದ್ದು, ಇಬ್ಬರ ಕೊಠಡಿಯಲ್ಲೂ ಒಬ್ಬೊಬ್ಬ ಕೈದಿಗಳು ಇದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!