Saturday, October 17, 2026
Homeತಾಜಾ ಸುದ್ದಿಅನುಶ್ರೀ ವಿಚಾರಕ್ಕೆ ಮಾಜಿ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದ್ಯಾಕೆ?

ಅನುಶ್ರೀ ವಿಚಾರಕ್ಕೆ ಮಾಜಿ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದ್ಯಾಕೆ?

- Advertisement -
- Advertisement -

ಬೆಂಗಳೂರು : ನಿರೂಪಕಿ ಅನುಶ್ರೀ ಪ್ರಕರಣದಲ್ಲಿ ದಿನಕ್ಕೊಂದು ಹೆಸರುಗಳು ಹೊರ ಬರುತ್ತಿವೆ. ಮಾಜಿ ಸಿಎಂ ಗಳು ಕರೆ ಮಾಡಿದ್ದರ ಬಗ್ಗೆ ಸುದ್ದಿ ಹರಿದಾಡುತ್ತಿವೆ. ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕೆಂಡಾಮಂಡಲರಾಗಿದ್ದಾರೆ.

ಯೆಸ್…ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರೂಪಕಿ ಅನುಶ್ರೀಗೆ ಮಾಜಿ ಸಿಎಂ ಒಬ್ಬರು ಕರೆ ಮಾಡಿದ್ದರು ಎಂಬುದಾಗಿ ಸುದ್ದಿ ಬರ್ತಾ ಇದೆ. ಎಸ್ ಎಂ ಕೃಷ್ಣಾ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸೇರಿದಂತೆ 6 ಮಾಜಿ ಸಿಎಂಗಳಿದ್ದಾರೆ. ಯಾರು ಆ ಮಾಜಿ ಸಿಎಂ ಎಂದು ಹೇಳಿ ಎಂಬುದಾಗಿ ಗರಂ ಆಗಿದ್ದಾರೆ.

ಇನ್ನು ನಾನು ಈ ಸಂಬಂಧ ಸಿಎಂ, ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆ. ಪ್ರತಿದಿನ ಒಂದೊಂದು ಹೆಸರು ಕೂಡ ಹೊರ ಬರ್ತಿರೋದ್ರಿಂದ ನಾನಂತೂ ತನಿಖೆಗೆ ಆಗ್ರಹಿಸುತ್ತೇನೆ ಎಂಬುದಾಗಿ ತಿಳಿಸಿದರು.

- Advertisement -

Latest News

error: Content is protected !!