Wednesday, July 2, 2025
Homeತಾಜಾ ಸುದ್ದಿಜಸ್ಟ್ ಸಿಸಿಬಿ ವಿಚಾರಣೆಯಿಂದಾಗಿ ಸಿನಿಮಾ ಅವಕಾಶ ತಪ್ಪಿ ಹೋಯ್ತು, ಅಳಲು ತೋಡಿಕೊಂಡ ಯುವನಟ

ಜಸ್ಟ್ ಸಿಸಿಬಿ ವಿಚಾರಣೆಯಿಂದಾಗಿ ಸಿನಿಮಾ ಅವಕಾಶ ತಪ್ಪಿ ಹೋಯ್ತು, ಅಳಲು ತೋಡಿಕೊಂಡ ಯುವನಟ

spot_img
- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಯಾರಿಗೆಲ್ಲಾ ಮುಳುವಾಗಿದೆ ಅಂತಾ ಪಟ್ಟಿ ಮಾಡೋದಕ್ಕೂ ಕಷ್ಟ ಅನ್ನುವಷ್ಟು ಹೆಸರುಗಳಿವೆ. ಪ್ರಕರಣದಲ್ಲಿ ಕೆಲವರ ತಮ್ಮ ಪಾತ್ರವಿಲ್ಲದ್ದಿದ್ದರೂ ಅವರ ಹೆಸರು ಸುಖಾಸುಮ್ಮನೆ ಹಾಳಾಗಿದೆ. ಸಿಸಿಬಿ ಜಸ್ಟ್ ವಿಚಾರಣೆಗೆ ಕರೆದವರನ್ನೂ  ಕೂಡ ಅವರೇ ಅಪರಾಧಿಗಳು ಅನ್ನುವಂತೆ ಬಿಂಬಿಸಿರೋದು ಅನೇಕ ಭವಿಷ್ಯಕ್ಕೆ ಮುಳುವಾದಂತೆ ಕಾಣಿಸುತ್ತಿದೆ.

View this post on Instagram

what you see in media is not real.

A post shared by ABHISHEK RAMDAS (@abhidassss) on

 ಇದೀಗ ಈ ಬಗ್ಗೆ ಯುವನಟರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೇವಲ ಸಿಸಿಬಿ ವಿಚಾರಣೆಯಿಂದ ನನ್ನ ಹೆಸ್ರು ಹಾಳಾಯ್ತು ಎಂದು ‘ಗಟ್ಟಿಮೇಳ’ ಧಾರಾವಾಹಿಯ ವಿಕ್ಕಿ ಪಾತ್ರಧಾರಿ ಅಭಿಷೇಕ್‌ ದಾಸ್‌ ದುಃಖ ತೋಡಿಕೊಂಡಿದ್ದಾರೆ.

ಹೌದು, ಕೆಲವು ದಿನಗಳ ಹಿಂದಷ್ಟೇ ಸಿಸಿಬಿ ಅಧಿಕಾರಿಗಳು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಅಭಿಷೇಕ್ ಅವ್ರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿರು. ಅದ್ರಂತೆ, ವಿಕ್ಕಿ ಕೂಡ ತಮಗೆ ತಿಳಿದಷ್ಟು ಮಾಹಿತಿಯನ್ನು ನೀಡಿ ಹೊರ ಬಂದಿದ್ರು. ಆದ್ರೆ, ಅದೇ ಅವ್ರ ವೃತ್ತಿ ಜೀವನಕ್ಕೆ ಮುಳುವಾಗಿದೆಯಂತೆ.

ಈ ಬಗ್ಗೆ ಸಾಮಾಜಿಕ ಜಾಲತಾಣವೊಂದಲ್ಲಿ ಸ್ವತಃ ಅಭಿಷೇಕ್ ದುಃಖ ತೋಡಿಕೊಂಡಿದ್ದು, ‘ನಾನು ಸಿಸಿನಿಮಾವೊಂದನ್ನ ಮಾಡಲು ತಯಾರಿ ನಡೆಸಿದ್ದೇ. ಅದ್ರ ವೆಚ್ಚ ಭರಿಸಲು ನಿರ್ಮಾಪಕರು ಕೂಡ ಒಪ್ಪಿಕೊಂಡಿದ್ದರು. ಆದರೆ ಡ್ರಗ್ಸ್ ವಿಚಾರಣೆಯಲ್ಲಿ ಭಾಗಿಯಾಗಿದ್ದ ಸಂಗತಿಯನ್ನ ಮಾಧ್ಯಮಗಳಲ್ಲಿ ನೆಗೆಟಿವ್ ಅಗಿ ತೋರಿಸಿದ ಕಾರಣ ಸಿನಿಮಾ ಮಾಡುವುದಿಲ್ಲ ಎಂದು ನಿರ್ಮಾಪಕರು ಹಿಂದೇಟು ಹಾಕಿದ್ದಾರೆ’ ಎಂದು ತಮ್ಮ ದುಃಖ ತೋಡಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!