ಮಂಗಳೂರು : ರಸ್ತೆಯಲ್ಲಿ ಹೋಗುತ್ತಿದ್ದ ವೇಲೆ ಸಿಕ್ಕಿದ ಬಂಗಾರವನ್ನು ವಾರಸುದಾರರಿಗೆ ತಲುಪಿಸಿ ಮಂಗಳೂರಿನ ಅಡ್ಯಾರಿನ ಯುವಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.
ಪ್ರಭಾಕರ್ ಪ್ರಭು ಎಂಬುವರು ಮಂಗಳೂರಿನ ಅಡ್ಯಾರ್ನ ಸಹ್ಯಾದ್ರಿ ಕಾಲೇಜಿನ ಬಳಿ ವಾಹನದಲ್ಲಿ ಬರುತ್ತಿದ್ದಾಗ ಒಂದು ಪರ್ಸೋಂದು ಸಿಕ್ಕಿದೆ. ಅದರಲ್ಲಿ ಚಿನ್ನವಿರೊದನ್ನು ಗಮನಿಸಿದ ಅವರು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ಬಳಿ ತಿಳಿಸಿದ್ದರು.
ಕೂಡಲೇ ಶಾಸಕ ವೇದವ್ಯಾಸ ಕಾಮತ್ ಅವರ ಸಲಹೆಯಂತೆ ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕರಾಗಿರುವ ರವೀಂದ್ರ ನಿಕ್ಕಂ ಅವರಲ್ಲಿ ವಿಚಾರ ತಿಳಿಸಿದ್ದು, ಅವರು ತಮ್ಮ ಆಪ್ತರ ವಲಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಅದು ಅಡ್ಯಾರ್ ಬಳಿಯ ನಿವಾಸಿ ಕೃಷ್ಣ ಆಚಾರ್ ಅವರಿಗೆ ಸೇರಿದ್ದು ಅಂಥ ತಿಳಿಸಿದ್ದಾರೆ.
ಬಳಿಕ ಇಂದು ಮಂಗಳೂರಿನ ಜೋಡು ಮಠ ರಸ್ತೆಯಲ್ಲಿರುವ ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಟ್ರಸ್ಟ್ ಪ್ರಮುಖರಾದ ಹನುಮಂತ ಕಾಮತ್ ಅವರ ನೇತೃತ್ವದಲ್ಲಿ ರವೀಂದ್ರ ನಿಕ್ಕಂ ಅವರ ಉಪಸ್ಥಿತಿಯಲ್ಲಿ ಪ್ರಭಾಕರ್ ಪ್ರಭು ಅವರು ಕೃಷ್ಣ ಆಚಾರ್ ಅವರಿಗೆ ಬಂಗಾರವನ್ನು ಹಸ್ತಾಂತರಿಸಲಾಯ್ತು.


