Tuesday, June 16, 2026
Homeಕರಾವಳಿಧರಿಸಿದ ಮಾಸ್ಕನಲ್ಲೇ ಚಿನ್ನ ಸಾಗಾಟ, ಕಾರವಾರದ ಯುವಕನ ಬಂಧನ

ಧರಿಸಿದ ಮಾಸ್ಕನಲ್ಲೇ ಚಿನ್ನ ಸಾಗಾಟ, ಕಾರವಾರದ ಯುವಕನ ಬಂಧನ

- Advertisement -
- Advertisement -

ಕಾರವಾರ : ದುಬೈನಿಂದ ಚಿನ್ನ ಸಾಗಾಟ ಮಾಡುವಾಗ ಏನೆಲ್ಲಾ ಸರ್ಕಸ್ ಮಾಡಿ ಚಿನ್ನ ಸಾಗಾಟ ಮಾಡ್ತಾರೆ. ಪೊಲೀಸರು ಅಂತಹ ಖದೀಮರನ್ನು ಯಾವ ರೀತಿ ಹೆಡೆಮುರಿ ಕಟ್ತಾರೆ ಅನ್ನೋದನ್ನು ನೀವು ನೋಡಿಯೇ ಇರ್ತೀರಾ. ಇದೀಗ ಅಂತಹ ಖರ್ತನಾಕ್ ಯುವಕನೊಬ್ಬ ಮಾಸ್ಕ್ ನಲ್ಲೇ ಚಿನ್ನ ಸಾಗಾಟ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ.

 ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಯುವಕನೊಬ್ಬ ಯು.ಎ.ಇನಿಂದ ಮಾಸ್ಕ್ ನಲ್ಲಿ ಚಿನ್ನ ಸಾಗಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಕೊರೊನಾ ಸೋಂಕು ಬಾರದಂತೆ ರಕ್ಷಣೆಗೆ ಬಳಸುವ ಮಾಸ್ಕ್ನಲ್ಲಿ  ಚಿನ್ನ ಇಟ್ಟು ಸಾಗಿಸಿದ ಭಟ್ಕಳದ ಅಮರ್ ಎಂಬಾತನನ್ನು ಇದೀಗ ಕೇರಳದ ಕರಿಪುರಂ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

ಯುಎಇನಿಂದ ಮಾಸ್ಕ್ ನಲ್ಲಿ 2 ಲಕ್ಷ ಮೌಲ್ಯದ 40 ಗ್ರಾಂ ಚಿನ್ನ ಅಡಗಿಸಿ ಅಲ್ಲಿನ ಏರ್‍ಪೋರ್ಟ್ ಅಧಿಕಾರಿಗಳಿಗೆ ಯಾಮಾರಿಸಿ ಕೇರಳದ ಕರಿಪುರಂ ವಿಮಾನ ನಿಲ್ದಾದಲ್ಲಿ ಇಳಿದಿದ್ದ. ಈತನ ಮೇಲೆ ಅನುಮಾನಗೊಂಡು ಕೋಯ್‍ಕ್ಕೋಡ್ ಏರ್ ಇಂಟಲಿಜೆನ್ಸಿ, ಕ್ಯಾಲಿಕಟ್ ಯುನಿಟ್, ಕೊಚ್ಚಿನ್ ಕಸ್ಟಮ್ಸ್ ಪ್ರಿವೆಂಟಿವ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಈತನ ಮಾಸ್ಕ್ ಅಸಲಿಯತ್ತು ಬೆಳಕಿಗೆ ಬಂದಿದ್ದು ಈತನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!