Monday, June 8, 2026
Homeಕರಾವಳಿಸುಳ್ಯ: ತಂದೆ-ತಾಯಿ ಇಲ್ಲದ ಅಪ್ರಾಪ್ತ ಬಾಲಕಿ ಗರ್ಭಿಣಿ, ಹುಬ್ಬಳ್ಳಿಯ ಯುವಕನ ಬಂಧನ

ಸುಳ್ಯ: ತಂದೆ-ತಾಯಿ ಇಲ್ಲದ ಅಪ್ರಾಪ್ತ ಬಾಲಕಿ ಗರ್ಭಿಣಿ, ಹುಬ್ಬಳ್ಳಿಯ ಯುವಕನ ಬಂಧನ

- Advertisement -
- Advertisement -

ಸುಳ್ಯ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಧರಿಸಲು ಕಾರಣನಾದ ಯುವಕನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹುಬ್ಬಳ್ಳಿಯ ಮುತ್ತಪ್ಪ ಬಂಧಿತ ಯುವಕ. ಕಳೆದ ಕೆಲ ವರ್ಷಗಳಿಂದ ಸುಳ್ಯದ ಕಲ್ಲುಮುಟ್ಲು ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮುತ್ತಪ್ಪ ಕೆಲಸಕ್ಕೆ ಹೋಗುತ್ತಿದ್ದ. ಮುತ್ತಪ್ಪನಿಗೆ ಅಲ್ಲೇ ಸ್ಥಳೀಯ ಮತ್ತು ತಂದೆ-ತಾಯಿ ಇಲ್ಲದ 15 ವರ್ಷ ಪ್ರಾಯದ ಯುವತಿಯ ಪರಿಚಯವಾಯಿತೆನ್ನಲಾಗಿದೆ. ಬಳಿಕ ಪ್ರೀತಿ ಬೆಳೆದು ಅವರಿಬ್ಬರು ಜತೆಗೆ ವಾಸಿಸುತ್ತಿದ್ದರು ಎನ್ನಲಾಗಿದೆ.

ಇದೀಗ ಆಕೆ ಗರ್ಭಿಣಿ ಯಾಗಿದ್ದು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಗೆ ವಿಷಯ ತಿಳಿದು ಅವರು ಸುಳ್ಯ ಸಿ.ಡಿ.ಪಿ.ಒ. ರಿಗೆ ವಿಷಯ ತಿಳಿಸಿದರು. ಸಿ.ಡಿ.ಪಿ.ಒ. ರವರ ದೂರಿನ ಮೇರೆಗೆ ಪೋಲೀಸರು ಆ ಯುವಕನ್ನು ಬಂಧಿಸಿದ್ದು, ಅಪ್ರಾಪ್ತೆಯ ಅತ್ಯಾಚಾರ ಕೇಸು ದಾಖಲಿಸಿದರು. ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!