Thursday, June 4, 2026
Homeತಾಜಾ ಸುದ್ದಿಬಿಜೆಪಿಯ ಹಿರಿಯ ನಾಯಕಿ "ಉಮಾ ಭಾರತಿಗೆ" ಅನ್ವಯಿಸದ ಕೊರೊನಾ ನಿಯಮಾವಳಿ!..

ಬಿಜೆಪಿಯ ಹಿರಿಯ ನಾಯಕಿ “ಉಮಾ ಭಾರತಿಗೆ” ಅನ್ವಯಿಸದ ಕೊರೊನಾ ನಿಯಮಾವಳಿ!..

- Advertisement -
- Advertisement -

ಡೆಹ್ರಾಡೂನ್: ಬಿಜೆಪಿಯ ಹಿರಿಯ ನಾಯಕಿ, ಮಾಜಿ ಸಚಿವೆ ಉಮಾ ಭಾರತಿ ಕೊರೊನಾ ಸೋಂಕಿತರಾಗಿದ್ದು, ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ.ಈ ಹಿಂದೆ ಉತ್ತರಾಖಾಂಡ ಸರಕಾರದ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಜೊತೆ ಉಮಾ ಭಾರತಿ ಕೇದಾರನಾಥಗೆ ತೆರಳಿದ್ದರು. ಸಚಿವ ರಾವತ್ ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಕೋವಿಡ್ ನಿಯಮದ ಪ್ರಕಾರ, ಅವರ ಸಂಪರ್ಕದಲ್ಲಿದ್ದವರೂ ಕ್ವಾರಂಟೈನ್ ಗೆ ಒಳಪಡಬೇಕಿತ್ತು.

ಕೋವಿಡ್ ಪಾಸಿಟಿವ್ ಎಂದೆನಿಸಿದ ಮೇಲೆ ಕೆಲವು ದಿನಗಳ ಕಾಲ ಎಲ್ಲೂ ಪ್ರಯಾಣಿಸದಂತೆ ರುದ್ರಪ್ರಯಾಗದ ವೈದ್ಯಾಧಿಕಾರಿ ಡಾ.ಡಿ.ಪಿ.ಶುಕ್ಲಾ ಉಮಾ ಭಾರತಿಗೆ ಸೂಚಿಸಿದ್ದರು. ಆದರೂ, ವೈದ್ಯರ ಸಲಹೆಯನ್ನು ಮೀರಿ, ಉಮಾ ಭಾರತಿ ಬದರೀನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೇ, ಅಲ್ಲಿ ಹಲವು ಜನರನ್ನು, ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರನ್ನು ಭೇಟಿಯಾಗಿದ್ದರು.

- Advertisement -

Latest News

error: Content is protected !!