Sunday, April 28, 2024
Homeತಾಜಾ ಸುದ್ದಿನಶೆ ರಾಣಿಯರಿಗಿಲ್ಲ ಬಿಡುಗಡೆ ಭಾಗ್ಯ; ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ

ನಶೆ ರಾಣಿಯರಿಗಿಲ್ಲ ಬಿಡುಗಡೆ ಭಾಗ್ಯ; ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ

spot_img
- Advertisement -
- Advertisement -

ಬೆಂಗಳೂರು: ಸೆಪ್ಟೆಂಬರ್ 14ರಿಂದ ಜೈಲಿನಲ್ಲಿರುವಂತ ನಟಿ ರಾಗಿಣಿ ಹಾಗೂ ಸೆ.16ರಿಂದ ಜೈಲಿನಲ್ಲಿರುವ ನಟಿ ಸಂಜನಾ ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದಂತ ಎನ್ ಡಿ ಪಿ ಎಸ್ ಕೋರ್ಟ್, ಇಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಮತ್ತೆ ಜೈಲೇ ಗತಿ ಎಂಬಂತೆ ಆಗಿದೆ.

ನಟಿ ರಾಗಿಣಿ, ನಟಿ ಸಂಜನಾ ಸೇರಿದಂತೆ ಐವರು ಸ್ಯಾಂಡಲ್ ವುಡ್ ಪ್ರಕರಣದ ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಇಂದು ಎನ್ ಡಿ ಪಿ ಎಸ್ ಕೋರ್ಟ್ ನ ನ್ಯಾಯಾಧೀಶರಾದಂತ ಸೀನಪ್ಪ ಅವರು ವಿಚಾರಣೆ ನಡೆಸಿದರು. ಮೊದಲು ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ಸೆ.30ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದರು.

ಈ ಬಳಿಕ ನಟಿ ಸಂಜನಾ, ನಟಿ ರಾಗಿಣಿ ಹಾಗೂ ಪ್ರಕರಣದ ಎ1 ಆರೋಪಿ ಶಿವ ಪ್ರಕಾಶ್, ಸಂಜನಾ ಆಪ್ತ ರಾಹುಲ್ ಮತ್ತು ವಿನಯ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದರು. ಇಂತಹ ಜಾಮೀನು ಅರ್ಜಿಯನ್ನು ಎನ್ ಡಿ ಪಿ ಎಸ್ ಕೋರ್ಟ್ ವಜಾಗೊಳಿಸಿದೆ.

- Advertisement -
spot_img

Latest News

error: Content is protected !!