Saturday, July 5, 2025
Homeತಾಜಾ ಸುದ್ದಿ'ಸಮಾಜದ ಸ್ವಾಸ್ಥ್ಯಕ್ಕಾಗಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ'- ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ

‘ಸಮಾಜದ ಸ್ವಾಸ್ಥ್ಯಕ್ಕಾಗಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ’- ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ

spot_img
- Advertisement -
- Advertisement -

ಸುಳ್ಯ : ಇಲ್ಲಿನ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಬೃಹತ್‌ ಸಾರ್ವಜನಿಕ ರಕ್ತದಾನ ಶಿಬಿರ ,ರಕ್ತ ವರ್ಗೀಕರಣ ಶಿಬಿರ ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಕಾರ್ಯಕ್ರಮ ವು ನಡೆಯಿತು .ಕಾರ್ಯಕ್ರಮವು ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ದ.ಕ,ಜಿಲ್ಲೆ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್, ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, (ರಿ) ಪಠೇಲ್ ಚಾರಿಟೇಬಲ್ ಟ್ರಸ್ಟ್ (ರಿ), ಪಠೇಲ್ ಮೆಡಿಕಲ್ &ಲ್ಯಾಬೋರೇಟರಿ ಸುಳ್ಯ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ,ಕೆ.ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಅಲ್ಹಾಜ್ ಇಸ್ಹಾಕ್ ಬಾಖವಿ ದುವಾ ನೆರವೇರಿಸಿದ್ದರು. ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಕರಾವಳಿ ವಹಿಸಿದ್ದರು.ಕಾರ್ಯಕ್ರಮವನ್ನುದ.ಕ.ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಚೇರ್ಮನ್ ಬಹು ಇಸ್ಮಾಯಿಲ್ ತಂಙಳ್ ಉದ್ಘಾಟಿಸಿದರು.

ರಕ್ತದಾನ ಶಿಬಿರದಲ್ಲಿ ಕೊಡಗು ಜಿಲ್ಲೆಯ ಪ್ರಮುಖ ನೇತಾರರು ಭಾಗವಹಿಸಿ ರಕ್ತದಾನ ಮಾಡಿದರು. ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ಅಬ್ದುಲ್ ಖಾದರ್ ಸ್ವಾಗತಿಸಿ ಸುಳ್ಯ ವಿಖಾಯ ಕ್ಲಸ್ಟರ್ ಕನ್ವೀನರ್ ತಾಜುದ್ದೀನ್ ಅರಂತೋಡು ವಂದಿಸಿದರು.

- Advertisement -
spot_img

Latest News

error: Content is protected !!