Friday, June 5, 2026
Homeತಾಜಾ ಸುದ್ದಿಪ್ರೀತಿಯ ಮಡದಿಗಾಗಿ ಚಂದ್ರ ಅಂಗಳದಲ್ಲಿ ಜಾಗ ಖರೀದಿಸಿದ ಪತಿರಾಯ

ಪ್ರೀತಿಯ ಮಡದಿಗಾಗಿ ಚಂದ್ರ ಅಂಗಳದಲ್ಲಿ ಜಾಗ ಖರೀದಿಸಿದ ಪತಿರಾಯ

- Advertisement -
- Advertisement -

ಪಾಕಿಸ್ತಾನ : ಹೆಂಡ್ತಿರು ಅಂದ್ರೆ ದೊಡ್ಡ ತಲೆನೋವು ಅನ್ನೋರೇ ಹೆಚ್ಚು. ಆದ್ರೆ ಇಲ್ಲೊಬ್ಬ ಪತಿ ಮಹಾಶಯ ತನ್ನ ಪ್ರೀತಿಯ ಪತ್ನಿಗೆ ಚಂದ್ರನ ಅಂಗಳದಲ್ಲಿ ಜಾಗವನ್ನು ಖರೀದಿಸಿದ್ದಾನೆ. ಪಾಕಿಸ್ತಾನದ ರಾವಲ್ಪಿಂಡಿಯಶೋಯೆಬ್ ಅಹ್ಮದ್ ಎಂಬಾತ ತನ್ನ ಪತ್ನಿಗಾಗಿ ಒಂದು ಎಕರೆ ಜಾಗವನ್ನು ಖರೀದಿ ಮಾಡಿದ್ದಾನೆ.

ಶೋಯೆಬ್ ಅಹ್ಮದ್  ಅಂತಾರಾಷ್ಟ್ರೀಯ ಚಂದ್ರನ ಭೂದಾಖಲೆ ನೋಂದಣಿಗೆ (International Lunar Lands Registry) $45 ತೆತ್ತು ಈ ಜಾಗವನ್ನು ಖರೀದಿ ಮಾಡಿದ್ದಾನೆ. ಬಾಲಿವುಡ್‌ನ ದಿವಂಗತ ನಟ ಸುಶಾಂತ್‌ ಸಿಂಗ್ ರಜಪೂತ್‌ರಿಂದ ತನಗೆ ಈ ಜಮೀನು ಖರೀದಿ ಮಾಡಲು ಸ್ಫೂರ್ತಿ ಸಿಕ್ಕಿದ್ದಾಗಿ ಅಹ್ಮದ್ ಹೇಳಿಕೊಂಡಿದ್ದಾನೆ.

ಚಂದ್ರನ ಮೇಲೆ ‘ಮೇರ್‌ ಮುಸ್ಕೋವಿನ್ಸ್‌’ ಹೆಸರಿನ ಜಾಗವೊಂದನ್ನು 2018ರಲ್ಲಿ ಸುಶಾಂತ್‌ ಖರೀದಿ ಮಾಡಿದ್ದರು. ಟಾಮ್ ಕ್ರೂಯ್ಸ್‌ ಹಾಗೂ ಶಾರುಖ್‌ ಖಾನ್‌ರಂಥ ದೊಡ್ಡ ಸೆಲೆಬ್ರಿಟಿಗಳು ಚಂದ್ರನ ಅಂಗಳಲ್ಲಿ ತಂತಮ್ಮ ಜಾಗಗಳನ್ನು ಖರೀದಿ ಮಾಡಿದ್ದಾರೆ.

- Advertisement -

Latest News

error: Content is protected !!