Thursday, June 4, 2026
Homeತಾಜಾ ಸುದ್ದಿಕಡಬ: ಸರಿಯಾದ ಕೆಲಸ ಸಿಗದಿದಕ್ಕೆ ಮನನೊಂದು ಎಂ.ಕಾಂ‌ ಪದವೀಧರೆ ನೇಣಿಗೆ ಶರಣು

ಕಡಬ: ಸರಿಯಾದ ಕೆಲಸ ಸಿಗದಿದಕ್ಕೆ ಮನನೊಂದು ಎಂ.ಕಾಂ‌ ಪದವೀಧರೆ ನೇಣಿಗೆ ಶರಣು

- Advertisement -
- Advertisement -

ಕಡಬ: ಎಂ.ಕಾಂ‌. ಪದವೀಧರೆಯಾಗಿದ್ದರೂ, ಉದ್ಯೋಗವಿಲ್ಲ ಎಂದು ಮನನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಪರಂಗಾಜೆ ನಿವಾಸಿ ಬಾಬು ಗೌಡ ಎಂಬವರ ಪುತ್ರಿ ಭವ್ಯ ಪಿ.ಬಿ.(27) ಎಂದು ಗುರುತಿಸಲಾಗಿದೆ.

ಈಕೆ ಎಂ.ಕಾಂ ಪದವೀಧರೆಯಾಗಿದ್ದು, ತನ್ನ ಅರ್ಹತೆಗೆ ತಕ್ಕುದಾದ ಉದ್ಯೋಗ ಇನ್ನೂ ದೊರೆತಿರಲಿಲ್ಲ. ಹಲವೆಡೆ ಉದ್ಯೋಗಕ್ಕೆ ಪ್ರಯತ್ನಿಸಿ ವಿಫಲರಾಗಿದ್ದರು. ಇದೇ ವಿಚಾರದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು.

ಈ ವಿಚಾರದಲ್ಲಿ ಮನನೊಂದು ಮನೆಯ ಕೋಣೆಯೊಳಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯುವತಿಯ ಸಹೋದರ ಉಮೇಶ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!