Wednesday, June 3, 2026
Homeತಾಜಾ ಸುದ್ದಿಕಿಶೋರ್ ಅಮಾನ್‌ ಶೆಟ್ಟಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಕಿಶೋರ್ ಅಮಾನ್‌ ಶೆಟ್ಟಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

- Advertisement -
- Advertisement -

ಮಂಗಳೂರು: ಶನಿವಾರ ಬಂಧಿಸಲ್ಪಟ್ಟಿದ್ದ ಡ್ಯಾನ್ಸರ್, ನೃತ್ಯ ಸಂಯೋಜಕ ಕಿಶೋರ್ ಅಮಾನ್‌ ಶೆಟ್ಟಿ(30) ಮತ್ತು ಅಕೀಲ್ ನೌಶೀಲ್(28)ನನ್ನು ‌ ಡ್ರಗ್ಸ್ ಸಾಗಣೆ ಹಾಗೂ ಸೇವನೆ ಆರೋಪದಲ್ಲಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಭಾನುವಾರ ಅಪಾದಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.


ಇಬ್ಬರನ್ನು ಭಾನುವಾರ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಇಂದು ವರದಿ ದೊರೆಯಲಿದೆ. ವರದಿ ನೆಗೆಟಿವ್‌ ಬಂದಲ್ಲಿ ಇಬ್ಬರ ವಿಚಾರಣೆಯನ್ನು ಪೊಲೀಸರು ಆರಂಭಿಸಲಿದ್ದು ಪಾಸಿಟಿವ್‌ ಆದರೆ ಕೊರೊನಾ ನಿಯಾಮಾವಳಿ ಪ್ರಕಾರವಾಗಿ ಚಿಕಿತ್ಸೆ ನೀಡುವ ಸಾಧ್ಯತೆಯಿದೆ.
ಕಿಶೋರ್‌ ಶೆಟ್ಟಿ ಸ್ವತಃ ಮಾದಕ ವ್ಯಸನಿಯಾಗಿದ್ದು ಇತ್ತೀಚೆಗೆ ಮಾದಕವಸ್ತು ಸಾಗಾಟವನ್ನು ಆರಂಭಿಸಿದ್ದರು ಎಂದು ಈವರೆಗಿನ ತನಿಖೆಯಲ್ಲಿ ಬಯಲಾಗಿದೆ.


ಡ್ಯಾನ್ಸರ್‌ ಆಗಿರುವ ಕಿಶೋರ್‌ ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮುಂಬೈನಿಂದ ನಗರಕ್ಕೆ ವಾಪಾಸ್‌ ಆಗಿ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದರು. ಆ ಕಾರಣದಿಂದಾಗಿ ಡ್ರಗ್ಸ್‌ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ. ಮುಂಬೈಯಲ್ಲಿರುವ ತಮ್ಮ ಸ್ನೇಹಿತರಿಂದ ಮುಂಬೈಯಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.

- Advertisement -

Latest News

error: Content is protected !!