Saturday, June 13, 2026
Homeತಾಜಾ ಸುದ್ದಿಪರಪ್ಪನ ಅಗ್ರಹಾರ ಜೈಲಿಗೆ ನಟಿ ಸಂಜನಾ ಗರ್ಲಾನಿ

ಪರಪ್ಪನ ಅಗ್ರಹಾರ ಜೈಲಿಗೆ ನಟಿ ಸಂಜನಾ ಗರ್ಲಾನಿ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಅವರು ಈಗಾಗಲೇ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇದೀಗ ರಾಗಿಣಿ ಸ್ನೇಹಿತೆ ಸಂಜನಾ ಗರ್ಲಾನಿ ಸರದಿ. ಸಂಜನಾ ಅವರಿಗೂ ಇದೇ ಜೈಲೇ ಗತಿಯಾಗಿದೆ. ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಸಂಜನಾ ಅವರ 14 ದಿನಗಳ ಸಿಸಿಬಿ ಕಸ್ಟಡಿ ಅವಧಿ ಇವತ್ತಿಗೆ ಅಂತ್ಯವಾಗಿದೆ. ಹಾಗಾಗಿ ಅವರನ್ನು ಇವತ್ತು ಒಂದನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಅದರಂತೆ ಇದೀಗ ಸಂಜನಾ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

- Advertisement -

Latest News

error: Content is protected !!