Friday, March 29, 2024
Homeಉದ್ಯಮ"ರಾಯಲ್‌ ಎನ್‌ಫೀಲ್ಡ್"‌ ಪ್ರಿಯರಿಗೆ ಬುಲೆಟ್ ಕಂಪನಿಯಿಂದ ಶಾಕ್

“ರಾಯಲ್‌ ಎನ್‌ಫೀಲ್ಡ್”‌ ಪ್ರಿಯರಿಗೆ ಬುಲೆಟ್ ಕಂಪನಿಯಿಂದ ಶಾಕ್

spot_img
- Advertisement -
- Advertisement -

ಬೆಂಗಳೂರು : ದೇಶದಲ್ಲಿ ಲಾಕ್‌ಡೌನ್ ಮುಕ್ತಾಯದ ಬಳಿಕ ಎಲ್ಲಾ ಮಾದರಿಯ ವ್ಯವಹಾರಗಳು ಕುಂಟುತ್ತಾ ಸಾಗಿದರೆ ಮೋಟಾರ್ ವಾಹನಗಳ ಮಾರಾಟವು ಸ್ವಲ್ಪ ಹೆಚ್ಚಾಗಿದೆ. ಇದೇವೇಳೆ
ರಾಯಲ್‌ ಎನ್‌ಫೀಲ್ಡ್‌ ಬುಲೆಟ್ ಪ್ರಿಯರಿಗೆ ಬುಲೆಟ್ ಕಂಪನಿ ಶಾಕ್ ನೀಡಿದೆ . ಕಂಪನಿಯು ತನ್ನ ಮೋಟಾರ್‌ಸೈಕಲ್ ಬೆಲೆಯನ್ನು ಹೆಚ್ಚಿಸಿದ್ದು ಬೆಲೆಏರಿಕೆಯ ಜೊತೆಗೆ ಬೈಕ್‌ನಲ್ಲಿ ಯಾವ ಯಾವ ವೈಶಿಷ್ಟ್ಯವನ್ನು ಹೆಚ್ಚಿಸಲಾಗಿದೆ ಎಂದು ಕಂಪನಿ ತಿಳಿಸಿಲ್ಲ.
ಮರುಮಾರಾಟ ಮೌಲ್ಯವೂ ಉತ್ತಮವಾಗಿರುವ ಬುಲೆಟ್ 350 ಬೈಕ್ ಗೆ ರಾಯಲ್ ಎನ್‌ಫೀಲ್ಡ್‌ನಲ್ಲಿ ಅತಿ ಹೆಚ್ಚು ಬೇಡಿಕೆಯಿದೆ. ಕಂಪನಿಯು ಇದನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಆದರೆ ಹೊಸತನದ ಮಧ್ಯೆ ಬುಲೆಟ್‌ನ ಹಳೆಯ ರೂಪವನ್ನು ಉಳಿಸಿಕೊಳ್ಳಲಾಗಿದೆ. ಬುಲೆಟ್ 350 ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಕಪ್ಪು ಬಣ್ಣವನ್ನು ಹೊಂದಿರುವ ಗೋಲ್ಡನ್ ಪಿನ್‌ಸ್ಟ್ರೈಪ್‌ಗಳನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಎಕ್ಸ್ 350 ವೇರಿಯಂಟ್ ಎಕ್ಸ್ ಶೋರೂಮ್ ಬೆಲೆ 1,27,093 ರೂ. ಆಗಿದೆ. ಅಲ್ಲದೆ ರಾಯಲ್ ಎನ್‌ಫೀಲ್ಡ್ 350 (ಬ್ಲ್ಯಾಕ್) ಎಕ್ಸ್ ಶೋರೂಮ್ ಬೆಲೆ 1,33,260 ರೂ ತಲುಪಿದೆ. ಇನ್ನು ಟಾಪ್-ಆಫ್-ಲೈನ್ ಬುಲೆಟ್ ಎಕ್ಸ್ 350 ಎಲೆಕ್ಟ್ರಿಕ್ ಸ್ಟಾರ್ಟ್ ಬೆಲೆ 1,42,705 ರೂ ಆಗಿದೆ. ಬುಲೆಟ್ 350 ರ ಎಲ್ಲಾ ಮೂರು ರೂಪಾಂತರಗಳ ಎಕ್ಸ್ ಶೋ ರೂಂ ಬೆಲೆಯನ್ನು ಕಂಪನಿಯು ಹೆಚ್ಚಿಸಿದೆ. ದೆಹಲಿಯಲ್ಲಿ ಈ ಬೆಲೆ 2,756 ರೂ. ಏರಿಕೆ ಮಾಡಲಾಗಿದೆ.

- Advertisement -
spot_img

Latest News

error: Content is protected !!