Monday, August 31, 2026
Homeತಾಜಾ ಸುದ್ದಿಶಾಸಕ ಜಮೀರ್ ಅಹ್ಮದ್ ಗೆ ಟಕ್ಕರ್ ಕೊಟ್ಟ ಪ್ರಶಾಂತ್ ಸಂಬರಗಿ

ಶಾಸಕ ಜಮೀರ್ ಅಹ್ಮದ್ ಗೆ ಟಕ್ಕರ್ ಕೊಟ್ಟ ಪ್ರಶಾಂತ್ ಸಂಬರಗಿ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂದು ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಗೆ ತೆರಳುತ್ತಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರಗಿ ಶಾಸಕ ಜಮೀರ್ ಅಹ್ಮದ್ ವಿರುದ್ಧ ಹರಿಹಾಯ್ದಿದ್ದಾರೆ.

ತಮ್ಮ ಕೈಯಲ್ಲಿ ಫೈಲ್ ಒಂದನ್ನು ಹಿಡಿಸಿಕೊಂಡಿದ್ದ ಸಂಬರಗಿ ಜಮೀರ್ ಆಸ್ತಿಯನ್ನ ಸರ್ಕಾರಕ್ಕೆ ಕೊಡಿಸ್ತೀನಿ. ಸತ್ಯ ಈ ಫೈಲ್ ನಲ್ಲಿದೆ, ಸತ್ಯ ತೆಗೆದುಕೊಂಡು ಹೊರಟಿದ್ದೇನೆ ಎಂದಿದ್ದಾರೆ. ತನ್ನ ವಿರುದ್ಧದ ಆರೋಪ ಸಾಬೀತಾದ್ರೆ ನನ್ನೆಲ್ಲಾ ಆಸ್ತಿ ಅನ್ನು ಸರ್ಕಾರಕ್ಕೆ ಕೊಡುತ್ತೇನೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದರು. ಅವರ ಹೇಳಿಕೆಗೆ ಪ್ರಶಾಂತ್ ಇಂದು ಈ ರೀತಿ ತಿರುಗೇಟು ಕೊಟ್ಟಿದ್ದಾರೆ.

ಇನ್ನು ಮತ್ತೆ ಶುಕ್ರವಾರ ವಿಚಾರಮೆ ಹಾಜರಾಗುವಂತೆ ಸಿಸಿಬಿ ಪ್ರಶಾಂತ್ ಸಂಬರಗಿಗೆ ನೊಟೀಸ್ ನೀಡಿದೆ.

- Advertisement -

Latest News

error: Content is protected !!