Wednesday, June 3, 2026
Homeತಾಜಾ ಸುದ್ದಿನಿನ್ನೆಯಷ್ಟೇ ಬರ್ತಡೇ ಆಚರಿಸಿಕೊಂಡಿದ್ದ ಕನ್ನಡದ ಖ್ಯಾತ ನಟ ಇಂದು ನಿಧನ

ನಿನ್ನೆಯಷ್ಟೇ ಬರ್ತಡೇ ಆಚರಿಸಿಕೊಂಡಿದ್ದ ಕನ್ನಡದ ಖ್ಯಾತ ನಟ ಇಂದು ನಿಧನ

- Advertisement -
- Advertisement -

ಬೆಂಗಳೂರು: ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹುಬ್ಬಳ್ಳಿ ಮೂಲದ ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ನಿನ್ನೆಯಷ್ಟೇ ತಮ್ಮ 60ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಜನ್ಮದಿನ ಸಂಭ್ರಮದ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಆದರೆ, ಬೆಳಗಿನ ಜಾವ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ..

ಸಾಕಷ್ಟು ನಾಟಕಗಳಲ್ಲಿ ಅಭನಯಿಸಿದ್ದ ಅವರು, ಯಾರೇ ನೀ ಅಭಿಮಾನಿ ಮೂಲಕ ಬೆಳ್ಳೆತೆರೆ ಪ್ರವೇಶಿಸಿದ್ದರು. ಅದಾದ ಬಳಿಕ ಹೃದಯ ಹೃದಯ, ಶ್ರೀಮಂಜುನಾಥ, ಸೂಪರ್, ಬುದ್ದಿವಂತ, ಸೇರಿದಂತೆ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಇನ್ನು ಸಾಕಷ್ಟು ಸೀರಿಯಲ‌್‌ಗಳಲ್ಲಿಯೂ ನಟಿಸಿದ್ದ ಇವರು, ಸದ್ಯ ಪ್ರಸಾರವಾಗುತ್ತಿರುವ ಪ್ರೇಮಲೋಕ ಮತ್ತು ಗಿಣಿರಾಮ್ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದರು. ಹುಬ್ಬಳ್ಳಿ ನವನಗರ ನಿವಾಸಿಯಾಗಿರುವ ಇವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.

- Advertisement -

Latest News

error: Content is protected !!