Saturday, July 5, 2025
Homeತಾಜಾ ಸುದ್ದಿನಟಿ ರಾಗಿಣಿಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ- ಬಿಜೆಪಿ ಸ್ಪಷ್ಟನೆ

ನಟಿ ರಾಗಿಣಿಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ- ಬಿಜೆಪಿ ಸ್ಪಷ್ಟನೆ

spot_img
- Advertisement -
- Advertisement -

ಬೆಂಗಳೂರು : ಪ್ರಕರಣದಲ್ಲಿ ಸಿಸಿಬಿ ಫೋಲೀಸರ ಬಂಧನಕ್ಕೆ ಒಳಪಟ್ಟಿರುವ ಚಿತ್ರ ನಟಿ ರಾಗಿಣಿ ದ್ವಿವೇದಿಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಚುನಾವಣಾ ಸಂದರ್ಭದಲ್ಲಿ ಹಲವು ಚಿತ್ರನಟಿಯರಂತೆ ರಾಗಿಣಿ ಅವರು ಸ್ವಯಂಪ್ರೇರಿತರಾಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರಬಹುದು. ಹಾಗೆಂದ ಮಾತ್ರಕ್ಕೆ ಅವರಿಗೂ ಪಕ್ಷಕ್ಕೂ ಬೇರೆ ರೀತಿಯ ಸಂಬಂಧವಿಲ್ಲ ಎಂದು ಪಕ್ಷ ಹೇಳಿದೆ.

ಮೇಲಾಗಿ ರಾಗಿಣಿ ದ್ವಿವೇದಿ ಪಕ್ಷದ ಕಾರ್ಯಕರ್ತರಲ್ಲ ಅಥವಾ ಆವರು ಸದಸ್ಯತ್ವ ಪಡೆದಿಲ್ಲ. ವಿಧಾನಸಭೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಪ್ರಚಾರ ನಡೆಸಿರಬಹುದುದು. ಆದರೆ ಪಕ್ಷ ಆಕೆಯನ್ನು ಪ್ರಚಾರಕ್ಕೆ ಕರೆದಿರಲಿಲ್ಲ ಎಂದು ಪತ್ರಿಕಾ ಪ್ರಕರಣೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ರಾಗಿಣಿ ಬಿಜೆಪಿ ನಾಯಕರ ಜತೆ ತೆಗೆಸಿಕೊಂಡಿರುವ ಫೋಟೊಗಳು ಹರಿದಾಡುತ್ತಿರುವುದು ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ ಪಕ್ಷ ಸ್ಪಷ್ಟನೆ ನೀಡಿದೆ.

- Advertisement -
spot_img

Latest News

error: Content is protected !!