Friday, August 28, 2026
Homeತಾಜಾ ಸುದ್ದಿನಟಿ ಸಂಜನಾಗೆ ಡ್ರಗ್ ಸಂಕಷ್ಟ:ನಟಿಯ ಆಪ್ತ ರಾಹುಲ್ ವಿಚಾರಣೆ

ನಟಿ ಸಂಜನಾಗೆ ಡ್ರಗ್ ಸಂಕಷ್ಟ:ನಟಿಯ ಆಪ್ತ ರಾಹುಲ್ ವಿಚಾರಣೆ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಗೆ ಡ್ರಗ್ ಲಿಂಕ್ ಹಿನ್ನಲೆ ಸಿಸಿಬಿಯಿಂದ ನಟಿಯರ ಆಪ್ತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಟಿ ರಾಗಿಣಿ ಸ್ನೇಹಿತ ರವಿಶಂಕರ್ ಹಾಗೂ ನಟಿ ಸಂಜನಾ ಆಪ್ತ ರಾಹುಲ್ ನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. 

ಬಹುಭಾಷ ನಟಿ ಸಂಜನಾ ಸ್ನೇಹಿತ ರಾಹುಲ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಟಿ ಸಂಜನಾ ಬರ್ತ್ ಡೇ ಪಾರ್ಟಿಯಲ್ಲಿ ರಾಹುಲ್ ಇದ್ದ ಪೋಟೋಗಳು ಪೊಲೀಸರಿಗೆ ಲಭ್ಯವಾಗಿವೆ. ಹೀಗಾಗಿ ಸಂಜನಾಳನ್ನು ಸಿಸಿಬಿ ಪೊಲೀಸರು ಕರೆಸುವ ಸಾಧ್ಯತೆ ಇದೆ. ರಾಹುಲ್ ಗೆ ಹಲವು ಮಂದಿ ಡ್ರಗ್ ಪೆಡ್ಲರ್ ಗಳ ಸಂಪರ್ಕ ಇರೋ ಬಗ್ಗೆ ತನಿಖೆ ನಡೆಯುತ್ತಿದೆ. ಈತನ ಮೊಬೈಲ್ ನಲ್ಲಿ ಡ್ರಗ್ಸ್ ಪೆಡ್ಲರ್ ಗಳ ಪೋನ್ ನಂಬರ್ ಕೂಡ ಪತ್ತೆಯಾಗಿದೆ.

- Advertisement -

Latest News

error: Content is protected !!