- Advertisement -
- Advertisement -
ಕಾಸರಗೋಡು: ಜಿಲ್ಲೆಯ ಕಣ್ಣೂರಿನ ಪೆರವೂರು ಎಂಬಲ್ಲಿ ಇಂದು ಬೆಳಗ್ಗೆ ಬಸ್ಸಿನಡಿಗೆ ಬಿದ್ದು ನರ್ಸ್ ಒಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಕಣ್ಣೂರು ಆಸ್ಟರ್ ಮಿಮ್ಸ್ ಆಸ್ಪತ್ರೆಯ ನರ್ಸ್ ದಿವ್ಯಾ ( 27) ಎಂದು ಗುರುತಿಸಲಾಗಿದೆ. ದಿವ್ಯಾ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು.
ಆಸ್ಪತ್ರೆಗೆ ತೆರಳಲು ಬಸ್ಸು ಹತ್ತುತ್ತಿದ್ದಾಗ ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ದಿವ್ಯಾರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
- Advertisement -