Thursday, August 27, 2026
Homeಕರಾವಳಿಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿ ತಲೆಮರೆಸಿಕೊಂಡಿದ್ದ ಬಾರ್ಯ ಕರ್ಪಾಡಿ ರಘುರಾಮಶೆಟ್ಟಿ ಬಂಧನ

ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿ ತಲೆಮರೆಸಿಕೊಂಡಿದ್ದ ಬಾರ್ಯ ಕರ್ಪಾಡಿ ರಘುರಾಮಶೆಟ್ಟಿ ಬಂಧನ

- Advertisement -
- Advertisement -

ಬೆಳ್ತಂಗಡಿ: ಮುಸ್ಲಿಂ ಸಮುದಾಯದ ಭವನಗೆ ಧಕ್ಕೆಯಾಗುವ ರೀತಿಯಲ್ಲಿ ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನಂತರ ತಲೆ ಮರೆಸಿಕೊಂಡಿದ್ದ ಬಾರ್ಯ ಪುತ್ತಿಲ ಗ್ರಾಮದ ರಘುರಾಮು ಶೆಟ್ಟಿಯನ್ನು ಇಂದು ಬಂಧಿಸಲಾಗಿದೆ.

ಪುತ್ತಿಲದ ಬಾವನ ಮನೆಯಲ್ಲಿ ಆರೋಪಿ ರಘುರಾಮು ಶೆಟ್ಟಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಅರಿತ ಬೆಳ್ತಂಗಡಿ ಸರ್ಕಲ್‌‌ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ‌ ನೇತೃತ್ವದ ಪೋಲೀಸರ ತಂಡ ಇಂದು ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಕರಣದ ವಿವರ:
ಬಾರ್ಯ ಪುತ್ತಿಲ ಗ್ರಾಮದ ರಘುರಾಮು ಶೆಟ್ಟಿ ಎಂಬ ವ್ಯಕ್ತಿ ಅಗಸ್ಟ್ 5 ರ ರಾಮಮಂದಿರ ಭೂಮಿ ಪೂಜೆಯಂದು ನೀತಿ ಸಂಹಿತೆ ಉಲ್ಲಂಘಿಸಿ ಪಟಾಕಿ ಸಿಡಿಸಿದ ವಿಚಾರಕ್ಕೆ ಪಂಜಾಲಕಟ್ಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಆ ಬಳಿಕ ಸಾಮಾಜಿಕ ಜಾಲದಲ್ಲಿ ತನ್ನನ್ನು ಯಾರಿಗೂ ಏನು ಮಾಡಲು ಸಾದ್ಯವಿಲ್ಲ ಹಾಗೂ ಮುಸ್ಲಿಂ ಸಮುದಾಯವನ್ನು ಬಾಂಬ್ ಹಾಕಿ ನಾಶ ಮಾಡಬೇಕು ಎಂದು ರಘುರಾಮು ಶೆಟ್ಟಿ ವಾಟ್ಸಾಪ್ ನಲ್ಲಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಕರ್ಪಾಡಿ ನಿವಾಸಿ ಜಲೀಲ್ ಎಂಬ ವ್ಯಕ್ತಿ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

- Advertisement -

Latest News

error: Content is protected !!