Saturday, June 6, 2026
Homeಮನರಂಜನೆಮನೆಯಲ್ಲೇ ಪರಿಸರ ಸ್ನೇಹಿ ಗಣೇಶ ತಯಾರಿಸಿದ ಡಿ ಬಾಸ್ ಪುತ್ರ ಹಾಗೂ ಪತ್ನಿ

ಮನೆಯಲ್ಲೇ ಪರಿಸರ ಸ್ನೇಹಿ ಗಣೇಶ ತಯಾರಿಸಿದ ಡಿ ಬಾಸ್ ಪುತ್ರ ಹಾಗೂ ಪತ್ನಿ

- Advertisement -
- Advertisement -

ಬೆಂಗಳೂರು : ಕೊರೊನಾದಿಂದಾಗಿ ಈ ಬಾರಿ ಅದ್ಧೂರಿ ಗಣೇಶೋತ್ಸವಕ್ಕೆ ಬ್ರೇಕ್ ಬಿದ್ದಿದೆ. ಎಲ್ಲರಲ್ಲೂ ತಮ್ಮ ತಮ್ಮ ಮನೆಯಲ್ಲಿ ಅತ್ಯಂತ ಸರಳವಾಗಿ ಹಬ್ಬ ಆಚರಿಸುತ್ತಿದ್ದಾರೆ. ಬಹುತೇಕರು ಪರಿಸರ ಸ್ನೇಹಿ ಗಣಪನೇ ಬೆಸ್ಟ್ ಅಂತಾ ಗ್ರೀನ್ ಗಣೇಶನನ್ನೇ ಆರಾಧಿಸುತ್ತಿದ್ದಾರೆ.

ಇನ್ನು ಡಿ ಬಾಸ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಅವರು ಕೂಡ ಮಣ್ಣಿನ ಗಣೇಶನನ್ನು ಮನೆಯಲ್ಲೇ ತಯಾರಿಸಿ ಎಲ್ಲರಿಗೂ ಗ್ರೀನ್ ಗಣೇಶನನ್ನೇ ಬಳಸುವಂತೆ ಸಂದೇಶ ನೀಡಿದ್ದಾರೆ. ಇನ್ನು ತಾಯಿ ಹಾಗೂ ಮಗ ಇಬ್ಬರೂ ಸೇರಿಕೊಂಡು ಮಣ್ಣಿನ ಗಣೇಶನನ್ನು ತಯಾರಿಸುವ ಫೋಟೋಗಳನ್ನು ವಿಜಯಲಕ್ಷ್ಮೀ ಅವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಗಣೇಶ ಮೂರ್ತಿಗಳನ್ನು ಯಾಕೆ ಹೊರಗಡೆ ಕೊಳ್ಳಬೇಕು, ತುಂಬ ಸರಳವಾಗಿ ಸುಂದರವಾದ ಗಣಪನನ್ನು ನಾವೇ ತಯಾರಿಸಬಹುದಲ್ವಾ? ಎಂದು ಬರೆದುಕೊಂಡಿದ್ದಾರೆ. ಎಲ್ಲರೂ ಪರಿಸರಸ್ನೇಹಿ ಗಣೇಶನನ್ನೇ ಬಳಸಿ ಎಂದು ಹೇಳುತ್ತಾ, ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಹಾಗೇ ನಾವಿಬ್ಬರಲ್ಲಿ ಯಾರು ಮಾಡಿದ ಗಣೇಶ ಚೆನ್ನಾಗಿದ್ದಾನೆ ಅಂತಾ ಪ್ರಶ್ನೆ ಮಾಡಿದ್ದಾರೆ.

- Advertisement -

Latest News

error: Content is protected !!