Thursday, June 4, 2026
Homeಇತರನನ್ನ ಮೇಲೆ ಗಂಡನ ಕುಟುಂಬದವರೂ ಸೇರಿ, 139 ಜನ ಲೈಂಗಿಕ ದೌರ್ಜನ್ಯವೆಸರಿದ್ದಾರೆಂದು ದೂರು ನೀಡಿದ ಮಹಿಳೆ

ನನ್ನ ಮೇಲೆ ಗಂಡನ ಕುಟುಂಬದವರೂ ಸೇರಿ, 139 ಜನ ಲೈಂಗಿಕ ದೌರ್ಜನ್ಯವೆಸರಿದ್ದಾರೆಂದು ದೂರು ನೀಡಿದ ಮಹಿಳೆ

- Advertisement -
- Advertisement -

ಹೈದರಾಬಾದ್​: ಕಳೆದ ಹಲವು ವರ್ಷಗಳಿಂದ ಸುಮಾರು 139 ಜನರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 25 ವರ್ಷದ ಮಹಿಳೆಯೊಬ್ಬಳು ಆರೋಪಿಸಿ ದೂರು ದಾಖಲಿಸಿರುವ ಘಟನೆ ಹೈದರಾಬಾದ್​ ನಲ್ಲಿ ನಡೆದಿದೆ.

2010ರಲ್ಲಿ ವಿವಾಹವಾದ ಈಕೆ ಒಂದು ವರ್ಷದೊಳಗೆ ವಿಚ್ಛೇದನ ಪಡೆದಿದ್ದಾಳೆ. ದೂರಿನಲ್ಲಿ ಆಕೆ, ತನ್ನ ಮಾಜಿ ಗಂಡನ ಕುಟುಂಬದ ಕೆಲ ಸದಸ್ಯರೂ ಸೇರಿ 139 ಜನರು ವಿವಿಧ ಸ್ಥಳಗಳಲ್ಲಿ ಬೆದರಿಸಿ ಲೈಂಗಿಕ ಕಿರುಕುಳ ನೀಡಿ ಶೋಷಿಸಿದ್ದಾರೆ. ಭಯ ಮತ್ತು ಆರೋಪಿಗಳ ಬೆದರಿಕೆಗಳಿಂದಾಗಿ ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಸದ್ಯ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪುಂಜಗುಟ್ಟ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

Latest News

error: Content is protected !!