Friday, June 5, 2026
Homeಕರಾವಳಿಉಡುಪಿಕುಂದಾಪುರ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಓರ್ವ ಪರಾರಿ

ಕುಂದಾಪುರ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಓರ್ವ ಪರಾರಿ

- Advertisement -
- Advertisement -

ಕುಂದಾಪುರ: ಜಪ್ತಿ ಗ್ರಾಮದ ಇಂಬಾಳಿಯ ಕೃಷ್ಣಯ್ಯ ಶೆಟ್ಟಿ ಎಂಬವರಿಗೆ ಸೇರಿದ ಶೆಡ್ಡಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕಂಡ್ಲೂರು ಜೆಎಂ ರಸ್ತೆಯ ಕರಾಣಿ ಮಹಮ್ಮದ್ ನದೀಮ್(25) ಹಾಗೂ ಬೆಟ್ಟಿ ಮಹಮ್ಮದ್ ಅಫ್ಜಲ್(28) ಬಂಧಿತ ಆರೋಪಿಗಳು. ದಾಳಿ ವೇಳೆ ರಯಾನ್ ಎಂಬಾತ ಪರಾರಿಯಾಗಿದ್ದಾನೆ.

ಬಂಧಿತರಿಂದ 8ಸಾವಿರ ರೂ. ಮೌಲ್ಯದ 360ಗ್ರಾಂ ಗಾಂಜಾ ಹಾಗೂ ಎರಡು ಬೈಕ್, ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!