Thursday, June 4, 2026
Homeಕರಾವಳಿಮಂಗಳೂರುಮಂಗಳೂರಿನ ಕೊಣಾಜೆಯ ಅಂಗಡಿಗಳಲ್ಲಿ ಸರಣಿ ಕಳ್ಳತನ

ಮಂಗಳೂರಿನ ಕೊಣಾಜೆಯ ಅಂಗಡಿಗಳಲ್ಲಿ ಸರಣಿ ಕಳ್ಳತನ

- Advertisement -
- Advertisement -

ಕೊಣಾಜೆ : ಮಂಗಳೂರು ಹೊರವಲಯದ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್ ಬಳಿ ಕಳೆದ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಆರು ಅಂಗಡಿಗಳಿಗೆ ಖದೀಮರು ಕನ್ನ ಹಾಕಿದ್ದಾರೆ.

ನಾಟೆಕಲ್‌ನ ಎರಡು ಸೂಪರ್ ಬಝಾರ್, ಹಾರ್ಡ್‌ವೇರ್ ಅಂಗಡಿ, ಬೇಕರಿ, ಟಯರ್ ಅಂಗಡಿ, ಹಾಲಿನ ಡೈರಿ, ಚಿಕನ್ ಅಂಗಡಿಗಳ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಕೆಲವೊಂದು ಅಂಗಡಿಗಳಿಂದ ನಗದು ದೋಚಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಕಳ್ಳರಿಗೆ ಹೆಚ್ಚಿನ ನಗದು ದೊರೆತಿಲ್ಲ ಎನ್ನಲಾಗಿದ್ದು, ಅಂಗಡಿಗಳ ಇತರ ಯಾವುದೇ ವಸ್ತುಗಳನ್ನು ಕಳವಾಗಿಲ್ಲ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಕೊಣಾಜೆ ಪೊಲೀಸರು ಪರೀಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!