Sunday, November 29, 2026
Homeಪ್ರಮುಖ-ಸುದ್ದಿಇಂದಿನಿಂದ ನಂದಿನಿ ಮೊಸರಿನ ದರ ಇಳಿಕೆ: ಪ್ರತಿ ಲೀಟರ್‌ಗೆ ₹2 ಕಡಿತಗೊಳಿಸಿದ ಕೆಎಂಎಫ್

ಇಂದಿನಿಂದ ನಂದಿನಿ ಮೊಸರಿನ ದರ ಇಳಿಕೆ: ಪ್ರತಿ ಲೀಟರ್‌ಗೆ ₹2 ಕಡಿತಗೊಳಿಸಿದ ಕೆಎಂಎಫ್

- Advertisement -
- Advertisement -

ನಂದಿನಿ ಮೊಸರಿನ ಬೆಲೆಯಲ್ಲಿ ಇಂದಿನಿಂದ ಇಳಿಕೆಯಾಗಿದ್ದು, ಪ್ರತಿ ಲೀಟರ್‌ಗೆ ₹2 ಕಡಿತಗೊಳಿಸಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಆದೇಶ ಹೊರಡಿಸಿದೆ.

ರಾಜ್ಯದ ಹಾಲು ಉತ್ಪಾದಕ ರೈತರ ಮನವಿಯ ಮೇರೆಗೆ ಕಳೆದ ನವೆಂಬರ್ 1ರಿಂದ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಲಾಗಿತ್ತು. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹2 ಇಳಿಕೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಎಂಎಫ್‌ಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ದರ ಕಡಿತಗೊಳಿಸಲಾಗಿದೆ.

ನವೆಂಬರ್ 1ರಿಂದ ಜಾರಿಗೆ ಬಂದಿದ್ದ ದರ ಪರಿಷ್ಕರಣೆಯಲ್ಲಿ ಒಂದು ಲೀಟರ್ ಮೊಸರಿನ ಬೆಲೆಯನ್ನು ₹54ರಿಂದ ₹68ಕ್ಕೆ ಹಾಗೂ ಅರ್ಧ ಲೀಟರ್ ಮೊಸರಿನ ಬೆಲೆಯನ್ನು ₹28ರಿಂದ ₹34ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಒಂದು ಲೀಟರ್ ಮೊಸರಿನ ದರ ₹66ಕ್ಕೆ ಇಳಿಕೆಯಾಗಲಿದೆ.

- Advertisement -

Latest News

error: Content is protected !!