- Advertisement -


- Advertisement -
ಉಡುಪಿ; ರೀಕ್ಷೆಗೆ ಓದಿಕೊಂಡು ಬಾಗಿಲು ಹಾಕದೆ ನಿದ್ದೆಗೆ ಜಾರಿದ್ದ ಎಂಐಟಿ ವಿದ್ಯಾರ್ಥಿಯ ಕೊಠಡಿಗೆ ನುಗ್ಗಿದ ಕಳ್ಳರು, ₹1.30 ಲಕ್ಷ ಮೌಲ್ಯದ ಲ್ಯಾಪ್ಟಾಪ್, ಮೊಬೈಲ್ ಫೋನ್ ಹಾಗೂ ಮಹತ್ವದ ದಾಖಲೆಗಳಿದ್ದ ಪರ್ಸ್ ದೋಚಿ ಪರಾರಿಯಾದ ಘಟನೆ ನಡೆದಿದೆ.
ಮೂಲತಃ ಉತ್ತರ ಪ್ರದೇಶದ ಸಾಗ್ನಿಕ್ ಬಸು (20) ವಸ್ತು ಕಳೆದುಕೊಂಡ ವಿದ್ಯಾರ್ಥಿ. ಉಡುಪಿ ತಾಲ್ಲೂಕಿನ ಹೆರ್ಗಾ ಗ್ರಾಮದ ಈಶ್ವರ ನಗರದ ‘ಶಾಂಭವಿ ಪ್ಯಾಲೇಸ್’ ವಸತಿ ಸಮುಚ್ಚಯದ 604ಎ ಕೊಠಡಿಯಲ್ಲಿ ಇವರು ವಾಸವಿದ್ದಾರೆ.
ನವೆಂಬರ್ 24ರಂದು ಪರೀಕ್ಷೆಗಾಗಿ ಓದುತ್ತಿದ್ದ ಸಾಗ್ನಿಕ್, ಬೆಳಗಿನ ಜಾವ ಸುಮಾರು 4.30ಕ್ಕೆ ಬಾಗಿಲಿಗೆ ಚಿಲಕ ಹಾಕದೆ ಮಲಗಿದ್ದಾರೆ. ಬೆಳಿಗ್ಗೆ 7.30ಕ್ಕೆ ಎದ್ದು ನೋಡಿದಾಗ ಬಾಗಿಲು ತೆರೆದಿದ್ದು, ರೂಮಿನಲ್ಲಿದ್ದ ಬೆಲೆಬಾಳುವ ವಸ್ತುಗಳು ಕಳವಾಗಿರುವುದು ಗೊತ್ತಾಗಿದೆ.
- Advertisement -


