- Advertisement -


- Advertisement -
ಕಾರ್ಕಳ: ಕಾರ್ಕಳ ತಾಲ್ಲೂಕಿನ ಸಾಣೂರು ಗ್ರಾಮದ ಪದ್ಮನಾಭ ನಗರದಲ್ಲಿ ಗುರುವಾರ ಹಾಡಹಗಲೇ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ₹5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹1 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
ಪದ್ಮನಾಭ ನಗರದ ‘ಮಹಾಮ್ಮಯ ಕೃಪಾ’ ನಿವಾಸಿ ಗಣೇಶ ಪೈ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಗುರುವಾರ ಬೆಳಿಗ್ಗೆ 11.10ರಿಂದ ಮಧ್ಯಾಹ್ನ 1 ಗಂಟೆಯ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲಿನ ಬೀಗ ಮುರಿದ ಖದೀಮರು, ಬೆಡ್ರೂಂನ ಕಪಾಟಿನ ಬೀಗ ಒಡೆದು ಸೊತ್ತು ಕಳವು ಮಾಡಿದ್ದಾರೆ.
₹1 ಲಕ್ಷ ನಗದು, 1 ಪವನ್ ಚಿನ್ನದ ಸರ, 4 ಪವನ್ ಚಿನ್ನದ ಕಡಗ, 7 ಗ್ರಾಂ ಚಿನ್ನದ ಉಂಗುರ ಹಾಗೂ 1 ಗ್ರಾಂ ಚಿನ್ನದ ನಾಣ್ಯ ಸೇರಿ ಒಟ್ಟು ₹6 ಲಕ್ಷ ಮೌಲ್ಯದ ಸೊತ್ತು ಕಳವಾಗಿದೆ ಎಂದು ದೂರಲಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
- Advertisement -


