Monday, November 16, 2026
Homeಕರಾವಳಿಉಡುಪಿಮಣಿಪಾಲ: ಪರ್ಕಳ ದೇವಸ್ಥಾನದ ಬಳಿ ದನ ಕಳ್ಳತನಕ್ಕೆ ವಿಫಲ ಯತ್ನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಣಿಪಾಲ: ಪರ್ಕಳ ದೇವಸ್ಥಾನದ ಬಳಿ ದನ ಕಳ್ಳತನಕ್ಕೆ ವಿಫಲ ಯತ್ನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

- Advertisement -
- Advertisement -

ಮಣಿಪಾಲ: ಉಡುಪಿ ಜಿಲ್ಲೆಯ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಭಾನುವಾರ (ನ.15) ಮುಂಜಾನೆ ದುಷ್ಕರ್ಮಿಗಳು ದನ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಮುಂಜಾನೆಯ ವೇಳೆ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ದೇವಸ್ಥಾನದ ಬಳಿ ಮಲಗಿದ್ದ ಜಾನುವಾರುಗಳನ್ನು ಕಳವು ಮಾಡಲು ಹೊಂಚು ಹಾಕಿದ್ದರು ಎನ್ನಲಾಗಿದೆ. ಕಾರಿನಿಂದ ಕೆಳಗಿಳಿದ ಕಳ್ಳರು ದನಗಳ ಸಮೀಪಕ್ಕೆ ಬರುತ್ತಿದ್ದಂತೆಯೇ ಎಚ್ಚೆತ್ತ ಜಾನುವಾರುಗಳ ಹಿಂಡು ಬೆದರಿ ಏಕಾಏಕಿ ಅಲ್ಲಿಂದ ಓಡಿಹೋಗಿದೆ. ಇದರಿಂದ ದನಗಳು ಕಳ್ಳರ ಕೈಗೆ ಸಿಗದೆ ಅಪಾಯದಿಂದ ಪಾರಾಗಿವೆ.

ಜಾನುವಾರುಗಳು ಓಡಿಹೋದ ಬಳಿಕವೂ ಕೆಲಹೊತ್ತು ಸ್ಥಳದಲ್ಲೇ ಕಾದಿದ್ದ ಆ ಅಪರಿಚಿತರು, ಕೊನೆಗೆ ಬರಿಗೈಯಲ್ಲಿ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಳ್ಳರ ಈ ಸಂಪೂರ್ಣ ಚಲನವಲನಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮುಂಜಾನೆಯ ವೇಳೆ ನಡೆದ ಈ ಕೃತ್ಯವು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ದನ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸಾರ್ವಜನಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!