Thursday, June 4, 2026
Homeಕರಾವಳಿಉಡುಪಿಬೈಂದೂರು: ನಿಯಂತ್ರಣ ತಪ್ಪಿದ ನಾಡದೋಣಿ ಬಂಡೆಗೆ ಡಿಕ್ಕಿ, ನಾಲ್ವರು ಮೀನುಗಾರರು ಮೃತ್ಯು

ಬೈಂದೂರು: ನಿಯಂತ್ರಣ ತಪ್ಪಿದ ನಾಡದೋಣಿ ಬಂಡೆಗೆ ಡಿಕ್ಕಿ, ನಾಲ್ವರು ಮೀನುಗಾರರು ಮೃತ್ಯು

- Advertisement -
- Advertisement -

ಕುಂದಾಪುರ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಅಲೆಗಳ ಹೊಡೆತಕ್ಕೆ ಮಗುಚಿ ಬಿದ್ದ ಪರಿಣಾಮ ನಾಲ್ವರು ಮೀನುಗಾರರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕೊಡೇರಿ ಎಂಬಲ್ಲಿ ರವಿವಾರ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ.

ಭಾರೀ ಮಳೆ ಮತ್ತು ಅಲೆಗಳ ಏರಿಳಿತವಿದ್ದ ಕಾರಣ ನಿಯಂತ್ರಣ ತಪ್ಪಿದ ನಾಡದೋಣಿ ಬಂಡೆಗೆ ಡಿಕ್ಕಿ ಹೊಡೆದು ಛಿದ್ರವಾಗಿದೆ. 10 ಮೀನುಗಾರರ ಪೈಕಿ ನಾಲ್ವರು ಮೃತರಾಗಿದ್ದು, ಶೋಧ ಕಾರ್ಯ ನಡೆಸಲಾಗಿದೆ. ಸಾಗರಶ್ರೀ ಎಂಬ ಹೆಸರಿನ ನಾಡದೋಣಿ ಹಾನಿಯಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ದೋಣಿಯು ಅಲೆಗಳ ಹೊಡೆತಕ್ಕೆ ಸಿಕ್ಕಿ ಮಗುಚಿ ಬಿದ್ದಿದೆ. ಈ ವೇಳೆ ಮೀನುಗಾರರು ಈಜಿ ಬಚಾವಾಗುವ ಪ್ರಯತ್ನ‌ ಮಾಡಿದರೆ, ನಾಲ್ವರು ಅಲೆಗಳ ರಭಸಕ್ಕೆ ಸಿಲುಕಿ ಕಣ್ಮರೆಯಾದರು.

ಈ ನಾಲ್ವರ ಮೃತದೇಹ ಈಗಾಗಲೇ ಪತ್ತೆಯಾಗಿದೆ. ಉಳಿದ ಮೀನುಗಾರರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!